ಕಾಸರಗೋಡು: ಬೀದಿ ನಾಯಿ ಅಡ್ಡ ಬಂದ ಪರಿಣಾಮ ನಿಯಂತ್ರಣ ತಪ್ಪಿದ ಆಟೋರಿಕ್ಷಾ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಚಾಲಕ ಮೃತಪಟ್ಟ ಘಟನೆ ನಡೆದಿದೆ. ಮಡಿಕೈ ಕೀಕ್ಕಾಂಕೋಟೆ ನಿವಾಸಿ ಎಂ.ಎಸ್. ಮೋಹನನ್ (58) ಮೃತಪಟ್ಟವರು. ಕಾಞಂಗಾಡು ಪುದಿಯಕೋಟ್ಟ ಎಂಬಲ್ಲಿ ನಿನ್ನೆ (ಆದಿತ್ಯವಾರ) ಈ ಘಟನೆ ನಡೆದಿದೆ.
ಆಟೋರಿಕ್ಷಾದಲ್ಲಿದ್ದ ಇಬ್ಬರು ಮಹಿಳೆಯರಿಗೂ ಗಾಯಗಳಾಗಿವೆ. ಭಾನುವಾರ (ಆಗಸ್ಟ್ 23) ಸಂಜೆ ಈ ಅಪಘಾತ ಸಂಭವಿಸಿದೆ. ಮೋಹನನ್ ಅಲಾಮಿಪಳ್ಳಿ ಆಟೋರಿಕ್ಷಾ ನಿಲ್ದಾಣದ ಚಾಲಕರಾಗಿದ್ದರು.
ಅಲಾಮಿಪಳ್ಳಿಯಿಂದ ಪ್ರಯಾಣಿಕರನ್ನು ಕಾಞಂಗಾಡ್ ನಗರಕ್ಕೆ ಕರೆದುಕೊಂಡು ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಹೊಸಕೋಟೆ ಇಂಡಿಯನ್ ಕಾಫಿ ಹೌಸ್ ಮುಂಭಾಗಕ್ಕೆ ತಲುಪಿದಾಗ ಬೀದಿ ನಾಯಿ ಏಕಾಏಕಿ ರಸ್ತೆಗೆ ಅಡ್ಡಲಾಗಿ ಓಡಿಬಂದಿದೆ. ನಾಯಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಪ್ರಯತ್ನಿಸುವಾಗ ಮೋಹನನ್ ಆಟೋರಿಕ್ಷಾದ ನಿಯಂತ್ರಣ ಕಳೆದುಕೊಂಡು ಸಮೀಪದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾರೆ.
ಡಿಕ್ಕಿಯ ರಭಸಕ್ಕೆ ಆಟೋರಿಕ್ಷಾ ಸಂಪೂರ್ಣವಾಗಿ ಹಾನಿಗೊಳಗಾಗಿದೆ. ಗಂಭೀರವಾಗಿ ಗಾಯಗೊಂಡ ಮೋಹನನ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆಟೋರಿಕ್ಷಾದಲ್ಲಿದ್ದ ಇಬ್ಬರು ಮಹಿಳೆಯರಿಗೂ ಗಾಯಗಳಾಗಿದ್ದು, ಅವರು ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.ಮೃತರಯ
ಮೃತರು ಪತ್ನಿ ಲೀಲಾ. ಮಕ್ಕಳಾದ ಅಜಯ್ ಮತ್ತು ಅನುರಾಗ್ ಎಂಬಿವರನ್ನು ಅಗಲಿದ್ದಾರೆ.
