ಆಹಾರ ಸೇವಿಸುತ್ತಿರುವಾಗ ಕುಸಿದುಬಿದ್ದು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಥಮ ವರ್ಷದ ಪದವಿ ವಿದ್ಯಾರ್ಥಿ ಮೃತ್ಯು


 ಕುಂಬಳೆ: ಆಹಾರ ಸೇವಿಸುತ್ತಿರುವಾಗ ಕುಸಿದುಬಿದ್ದು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಥಮ ವರ್ಷದ ಪದವಿ ವಿದ್ಯಾರ್ಥಿ ನಿಧನರಾದರು. ಕುಂಬಳ ಕುಂಡಂಗೇರಡುಕದ ಅಬ್ದುಲ್ಲಾ ಅವರ ಪುತ್ರ ಮುಬಾರಿಸ್ (18) ಭಾನುವಾರ ರಾತ್ರಿ ಸಾವಿಗೆ ಶರಣಾಗಿದ್ದಾರೆ.

ಶನಿವಾರ ರಾತ್ರಿ ಆಹಾರ ಸೇವಿಸುತ್ತಿರುವಾಗ ಮುಬಾರಿಸ್ ಕುಸಿದುಬಿದ್ದಿದ್ದರು. ತಕ್ಷಣವೇ ಅವರನ್ನು ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರ ತಪಾಸಣೆಯಲ್ಲಿ ಸ್ಥಿತಿ ಗಂಭೀರವಾಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಮಂಗಳೂರಿಗೆ ರವಾನಿಸಲಾಗಿತ್ತು.

ಮಂಗಳೂರಿನಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಯಾಗಿರುವ ಮುಬಾರಿಸ್, ಎಂ.ಎಸ್.ಎಫ್. (MSF) ಕುಂಬಳ ವಲಯ ಸಮಿತಿ ಸದಸ್ಯರಾಗಿದ್ದಾರೆ. ತಾಯಿ: ಆಯಿಷಾ. ಸಹೋದರರು: ಮನಸ್, ಮಿರ್ಜಾ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು