ನೀರ್ಚಾಲು: ಸೇವಾ ಭಾರತಿ ಬದಿಯಡ್ಕ ಪಂಚಾಯತ್ ಘಟಕದ ವತಿಯಿಂದ ಕನ್ಯಪ್ಪಾಡಿ ಆಶ್ರಯ ಆಶ್ರಮದಲ್ಲಿ ನಿವೃತ್ತ ಯೋಧ ಶ್ರೀ ಕೃಷ್ಣ ನಾಯ್ಕ್ ಮಲ್ಲಡ್ಕರವರಿಗೆ ಗೌರವಾರ್ಪಣೆ ನೀಡಿ ಅಭಿನಂದಿಸಲಾಯಿತು. ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಯೋಧರು ತಮ್ಮ ವೃತ್ತಿ ಜೀವನದ ಅನುಭವಗಳನ್ನು ವಿವರಿಸಿದರು.
ಮುಖ್ಯ ಅತಿಥಿಯಾಗಿ ಬಂದ ಶ್ರೀಅರವಿಂದ ಪೈ (ಉದ್ಯಮಿ , ಬದಿಯಡ್ಕ) ದೀಪ ಪ್ರಜ್ವಲನೆ ಮಾಡುವ ಮೂಲಕ ಸಮಾರಂಭವನ್ನು ಉದ್ಘಾಟಿಸಿ ಸೇವಾ ಭಾರತಿ ನೀಡುವ ಜನೋಪಯೋಗಿಯಾದ ಸಮಾಜಮುಖಿ ಕಾರ್ಯಕ್ರಮಗಳನ್ನು ಅಭಿನಂದಿಸಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮ ರಾದವರಿಗೆ ಮೌನ ಪ್ರಾರ್ಥನೆ ಮಾಡಲಾಯಿತು.ಸೇವಾ ಭಾರತಿಯ , ಪದಾಧಿಕಾರಿ ಗಳು ಹಾಗೂ ಕಾಸರಗೋಡು ಜಿಲ್ಲಾ ಸೇವಾ ಭಾರತಿ ಕಾರ್ಯದರ್ಶಿ ಶ್ರೀ ಪ್ರತೀಕ್ ಆಳ್ವ, ಶ್ರೀ ರಮೇಶ್ ಕಳೇರಿ (ಮಾನ್ಯ ಸಂಘ ಚಾಲಕ್ ರಾ. ಸ್ವ ಸೇ ಸಂಘ, ಬದಿಯಡ್ಕ ಖಂಡ್) ಉಪಸ್ಥಿತಿರಿದ್ದರು. ಸೇವಾ ಭಾರತಿ ಅಧ್ಯಕ್ಷ ಶ್ರೀ ಸದಾಶಿವ ಮಾಸ್ತರ್ ರವರ ಅಧ್ಯಕ್ಷತೆಯಲ್ಲಿ ಐಕ್ಯ ಮಂತ್ರದೊಂದಿಗೆಆರಂಭವಾದ ಸಭೆಗೆ ಕೋಶಾಧಿಕಾರಿ ಶ್ರೀ ಗಣೇಶ್.ಬಿ ಸ್ವಾಗತಿಸಿ, ಕಾರ್ಯದರ್ಶಿ ಶ್ರೀ ರವೀಶ್ ಕುಮಾರ್ ಧನ್ಯವಾದವಿನ್ನಿತ್ತರು.ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.