ಬದಿಯಡ್ಕ: ಓಣಂ ಸ್ಪೆಶಲ್ ಡ್ರೈವ್ ಅಂಗವಾಗಿ ಬದಿಯಡ್ಕ ಎಕ್ಸ್ಪ್ರೆಸ್ ರೇಂಜ್ ಇನ್ಸ್ಪೆಕ್ಟರ್ ಜಿಷ್ಣು ಪಿ.ಆರ್. ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೆರ್ಲ ಒರುಂಬೋಡಿ ಬಳಿಯಿಂದ 162 ಗ್ರಾಂ ಎಂಡಿಎಂಎ ವಶಪಡಿಸಲಾಗಿದೆ. ಇದಕ್ಕೆ ಸಂಬಂದಪಟ್ಟಂತೆ ಒರುಂಬೋಡಿ ನಿವಾಸಿ ಅಬ್ದುಲ್ ಅಸೀಸ್ ಎಂಬಾತನನ್ನು ಬಂಧಿಸಲಾಗಿದ್ದು ಈತನ ಕಾರು ಸಹ ವಶಪಡಿಸಲಾಗಿದೆ.
ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಎಕ್ಸ್ಪ್ರೆಸ್ ಅಧಿಕಾರಿಗಳು ಅಬ್ದುಲ್ ಅಸೀಸ್ ನ ಕೈಯಿಂದಲೂ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಕಾರಿನಿಂದಲೂ ಎಂಡಿಎಂಎ ವಶಪಡಿಸಲಾಗಿದೆ.
ಎಕ್ಸ್ಪ್ರೆಸ್ ಅಸಿಸ್ಟೆಂಟ್ ಇನ್ಸ್ಪೆಕ್ಟರ್ ಶ್ರೀನಿವಾಸನ್ ಪತ್ತಿಲ್, ಇತರರಾದ ಮಂಜುನಾಥ ಆಳ್ವ, ವಿಜಯನ್ ಸಿ, ಪ್ರಜಿತ್ ಕೆ.ಆರ್, ಪ್ರಭಾಕರನ್ ಎಂಎ, ಜನಾರ್ಧನ ಎನ್ ವಿನೋದ್ ಬಿ, ಧನ್ಯ ಟಿ, ಚಾಲಕ ಸಾಗರ್ ಎಸ್.ಜಿ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.
Tags
ಪೆರ್ಲ

