ಖಾಸಗಿ ವೈದ್ಯಕೀಯ ಕ್ಲಿನಿಕ್ ಮಾಲೀಕ ವಿದ್ಯುತ್ ಶಾಕ್ ತಗುಲಿ ಮೃತ್ಯು


 ಕೋಜಿಕೋಡ್: ಖಾಸಗಿ ವೈದ್ಯಕೀಯ ಕ್ಲಿನಿಕ್ ಮಾಲೀಕ ವಿದ್ಯುತ್ ಶಾಕ್ ತಗುಲಿ ಮೃತಪಟ್ಟ ಘಟನೆ ನಡೆದಿದೆ. ಕೊಯಿಲಾಂಡಿ ಮಾರಾಮುಟಂ ರಸ್ತೆಯಲ್ಲಿ ಎಲ್.ಐ.ಸಿ. ಕಚೇರಿಯ ಎದುರುಗಿರುವ 'ಲಯಲ್ ಹೆಲ್ತ್ ಕೇರ್' ಮಾಲೀಕ ಪೆರುವಟ್ಟೂರ್ ತಾವೋಳಿಥಾಳ್ರೆ ಸುಜಯ ನಿವಾಸದ ಸುನೀಲ್ ಕುಮಾರ್ (50) ಮೃತಪಟ್ಟವರು. ನಿನ್ನೆ  (ಸೋಮವಾರ) ಸಂಜೆ 6:30ರ ಸುಮಾರಿಗೆ ಈ ಘಟನೆ ನಡೆದಿದೆ. ಕಂಪ್ಯೂಟರ್ ದುರಸ್ತಿಗೊಳಿಸುವ ವೇಳೆ ಈ ಘಟನೆ ನಡೆದಿದೆ.

ಲ್ಯಾಬ್‌ನೊಳಗಿನ ಕಂಪ್ಯೂಟರ್‌ನ ಯು.ಪಿ.ಎಸ್‌ನಿಂದ ವಿದ್ಯುತ್  ಶಾಕ್ ತಗುಲಿದೆ‌ ಎಂದು ತಿಳಿದುಬಂದಿದೆ. ಸಮೀಪದಲ್ಲಿದ್ದವರು ಕೂಡಲೇ ಅವರನ್ನು ಕೊಯಿಲಾಂಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿದರಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಮೃತದೇಹವನ್ನು ಕೋಳಿಕೋಡ್ ವೈದ್ಯಕೀಯ ಕಾಲೇಜು ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಅವರು ರಾಮನ್ ನಾಯರ್ ಮತ್ತು ಲೀಲಾ ದಂಪತಿಯ ಪುತ್ರರಾಗಿದ್ದಾರೆ. ಪತ್ನಿ: ಸಬಿನಿ, ಪುತ್ರ: ವೇದುರ್ ವರದ್, ಸಹೋದರ: ಜಯಕೃಷ್ಣನ್ (ಕುರುವಂಗಾಡ್).


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು