ವಿಭಿನ್ನ ಪರಿಕಲ್ಪನೆಯೊಂದಿಗೆ ಕುಟ್ಟಿಕೋಲ್ ವೀಟ್ಟಿಯಾಡಿ 9ನೇ ವಾರ್ಡ್, ಗ್ರಾಮಸಭೆಗೆ ಬರುವವರಿಗೆ ತರಕಾರಿ ಬೀಜಗಳೊಂದಿಗೆ ಮರಳುವ ಅವಕಾಶ


ಬಂದಡ್ಕ: ಕುಟ್ಟಿಕೋಲ್ ಗ್ರಾಮ ಪಂಚಾಯತ್‌ನ ವೀಟ್ಟಿಯಾಡಿ 9ನೇ ವಾರ್ಡ್‌ನ ಜನರು ಗ್ರಾಮಸಭೆಯಲ್ಲಿ ಭಾಗವಹಿಸಿದರೆ ತರಕಾರಿ ಬೀಜಗಳೊಂದಿಗೆ ಹಿಂತಿರುಗಬಹುದು. ಇಂತಹ ವಿನೂತನ ಆಲೋಚನೆಯನ್ನು ವಾರ್ಡ್ ಸದಸ್ಯ ಮಹೇಶ್ ಗೋಪಾಲ್ ಮುಂದಿಟ್ಟಿದ್ದಾರೆ. ಪ್ರತಿಯೊಂದು ಮನೆಯಲ್ಲೂ ತರಕಾರಿ ಕೃಷಿಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಬೀಜಗಳನ್ನು ವಿತರಿಸಲಾಗುತ್ತಿದೆ.

ಈ ಹಿಂದೆ ವಾರ್ಡ್‌ನ ಹಿರಿಯ ನಾಗರಿಕರಿಗೆ 'ಅಂಬೇಡ್ಕರ್ ಸ್ನೇಹಸ್ಪರ್ಶ' ಯೋಜನೆಯಡಿ ನೆರವಿನ ಉಪಕರಣಗಳನ್ನು ವಿತರಿಸಿ ಹಾಗೂ ಮಕ್ಕಳಿಗೆ 'ನಮೋ ಕಿಟ್' ಹೆಸರಿನಲ್ಲಿ ಶೈಕ್ಷಣಿಕ ಸಾಮಗ್ರಿಗಳ ಕಿಟ್ ವಿತರಿಸುವ ಮೂಲಕ ವೀಟ್ಟಿಯಾಡಿ ವಾರ್ಡ್ ಮತ್ತು ವಾರ್ಡ್ ಸದಸ್ಯರು ಗಮನ ಸೆಳೆದಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು