ರಾಜ್ಯದಲ್ಲಿ ನಾಳೆಯೂ ಅತಿ ತೀವ್ರ ಮಳೆ; ಕಾಸರಗೋಡು ಸಹಿತ 12 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್


 ತಿರುವನಂತಪುರಂ: ರಾಜ್ಯದಲ್ಲಿ ನಾಳೆಯೂ ಅತ್ಯಂತ ಭಾರಿ ಮಳೆ ಮುಂದುವರಿಯಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಮಳೆಯ ಹಿನ್ನೆಲೆಯಲ್ಲಿ ನಾಳೆ ಕಾಸರಗೋಡು ಸಹಿತ 12 ಜಿಲ್ಲೆಗಳಲ್ಲಿ 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ.

ಹಿಂದೆ ಪ್ರಕಟಿಸಲಾಗಿದ್ದ 'ಯೆಲ್ಲೋ ಅಲರ್ಟ್' ಅನ್ನು ಪರಿಷ್ಕರಿಸಿ 'ಆರೆಂಜ್ ಅಲರ್ಟ್' ಆಗಿ ಬದಲಾಯಿಸಲಾಗಿದೆ.  ಕಾಸರಗೋಡು, ಕಣ್ಣೂರು,   ಪತ್ತನಂತಿಟ್ಟ, ಆಲಪ್ಪುಳ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ, ತೃಶ್ಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್, ವಯನಾಡ್ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಜಾರಿಯಲ್ಲಿದೆ. ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು