ಸಂತಸದ ಉತ್ತುಂಗದಲ್ಲಿ ಪಡಿಯಡ್ಪು ಉನ್ನತಿಯ ಸುರೇಶ್, 37 ನೇ ವಯಸ್ಸಿನಲ್ಲಿ ಕೈಸೇರಿದ ಆಧಾರ್ ಕಾರ್ಡು, ಚುನಾವಣಾ ಐಡಿ


 ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯತಿನ 18 ನೇ ವಾರ್ಡು ವ್ಯಾಪ್ತಿಯ ಪಡಿಯಡ್ಪು ಪರಿಶಿಷ್ಟ ಜಾತಿ ಉನ್ನತಿಯ ನಿವಾಸಿ, ಕೂಲಿ ಕಾರ್ಮಿಕ ಸುರೇಶ್ ಅವರಿಗೆ ತನ್ನ 37 ನೇ ವಯಸ್ಸಿನಲ್ಲಿ ಆಧಾರ್ ಕಾರ್ಡ್ ಹಾಗೂ ಚುನಾವಣಾ ಗುರುತು ಚೀಟಿ ಲಭಿಸಿದೆ. ವಾರ್ಡು ಸದಸ್ಯೆ ಹಾಗೂ ಗ್ರಾಮ ಪಂಚಾಯತು ಸ್ಥಾಯಿ ಸಮಿತಿ ಅಧ್ಯಕ್ಷೆ ರಜನಿ ಸಂದೀಪ್ ಅವರ ನೇತೃತ್ವದಲ್ಲಿ ನಡೆಸಿದ ಪರಿಶ್ರಮದ ಪಲವಾಗಿ ಇವು ಲಭಿಸಿದೆ. ಬದಿಯಡ್ಕ ಗ್ರಾಮ ಪಂಚಾಯತು ಕಾರ್ಯಾಯದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತು ಕಾರ್ಯದರ್ಶಿ ಮನೋಜ್ ಕುಮಾರ್ ಅವರು ಆಧಾರ್ ಕಾರ್ಡ್ ಹಾಗೂ ಐಡಿ.ಕಾರ್ಡುಗಳನ್ನು ಸುರೇಶ್ ಅವರಿಗೆ ಹಸ್ತಾಂತರಿಸಿದರು.

    ಶಾಲಾ  ಪ್ರಮಾಣಪತ್ರ ಮಾತ್ರ ಹೊಂದಿದ್ದ ಸುರೇಶ್ ಅವರ ಹೆಸರು ರೇಶನ್ ಕಾರ್ಡುನಲ್ಲಿ ಸೇರಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರಿಗೆ ಆಧಾರ್ ಕಾರ್ಡ್ ಆಗಲೀ ಚುನಾಬಣಾ ಗುರುತು ಚೀಟಿ (ಇಲೆಕ್ಷನ್ ಐಡಿ) ಆಗಲೀ ಲಭಿಸಿರಲಿಲ್ಲ. ಈ ದಾಖಲೆ ಪತ್ರಗಳು ಇಲ್ಲದ ಕಾರಣ ಸುರೇಶ್ ಅವರು ಈ ವರೆಗೆ ಮತದಾನದಲ್ಲಿ ಪಾಲ್ಗೊಂಡಿರಲಿಲ್ಲ.

    ಕಳೆದ ಪಂಚಾಯತು ಚುನಾವಣೆಯಲ್ಲಿ ಜನಪ್ರತಿನಿಧಿಯಾಗಿ ಆಯ್ಕೆಯಾದ ರಜನಿ ಸಂದೀಪ್ ಅವರು ಸುರೇಶ್ ಅವರ ಮಾಹಿತಿಯನ್ನು ತಿಳಿದು ಅದಕ್ಕಾಗಿ ಸ್ಪಂದಿಸಿದರು.  ಗ್ರಾಮ ಪಂಚಾಯತು ಕಾರ್ಯದರ್ಶಿ ಅವರ ಸಹಕಾರದೊಂದಿಗೆ ಬಿ‌‌.ಎಲ್.ಒ ಮೂಲಕ

ಶಾಲಾ ಪ್ರಮಾಣಪತ್ರ  ಲಗತ್ತಿಸಿ ಅರ್ಜಿ ಹಾಕಿ ಐಡಿ ಕಾರ್ಡು ಹಾಗೂ ಆಧಾರ್ ಕಾರ್ಡು ಪಡೆಯಲಾಯಿತು. ಇದರಿಂದಾಗಿ ಮುಂದಿನ ಚುನಾವಣೆಯಲ್ಲಿ ಸುರೇಶ್ ಅವರು ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ. ಗೆದ್ದು ಬಂದ ವಾರ್ಡಿನ ಜನರ ಸಮಸ್ಯೆಗಳಿಗೆ ಸ್ಪಂದಿಸಿದ ಜನಪ್ರತಿನಿಧಿ ರಜನಿ ಸಂದೀಪ್ ಅವರನ್ನು ವಾರ್ಡಿನ ಜನತೆ ಶ್ಲಾಘಿಸಿದ್ದಾರೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು