ರಾಜ್ಯದಲ್ಲಿಂದು ಅತಿ ತೀವ್ರ‌ ಮಳೆ; ಕಾಸರಗೋಡು ಸಹಿತ 8 ಜಿಲ್ಲೆಗಳಲ್ಲಿ ರೆಡ್ ಅಲರ್ಟ್


 ತಿರುವನಂತಪುರಂ: ರಾಜ್ಯದಲ್ಲಿ ಇಂದು ಅತಿ ತೀವ್ರ ಮಳೆ ಬರಲಿದೆಯೆಂದು ಕೇಂದ್ರ ಹವಾಮಾನ ಇಲಾಖೆ ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಕಾಸರಗೋಡು ಸಹಿತ 8 ಜಿಲ್ಲೆಗಳಲ್ಲಿ ರೆಡ್ ಅಲರ್ಟ ಘೋಷಿಸಲಾಗಿದೆ. ಕಾಸರಗೋಡು, ಕಣ್ಣೂರು, ವಯನಾಡ್, ಕೋಜಿಕ್ಕೋಡು, ಮಲಪ್ಪುರಂ ಪತ್ತನಂತಿಟ್ಟ, ಕೊಟ್ಟಯಂ, ಇಡುಕ್ಕಿ ಎಂಬೀ‌ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ಭಾರೀ ಮಳೆ ಹಾಗೂ ಗಾಳಿ ಉಂಟಾಗಲಿದ್ದು ಸಾರ್ವಜನಿಕರು ಎಚ್ಚರ ವಹಿಸುವಂತೆ ಆದೇಶಿಸಲಾಗಿದೆ
.
   ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್,     ತಿರುವನಂತಪುರಂ, ಕೊಲ್ಲಂ, ಆಲಪುಳ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು