ಕಾಸರಗೋಡು: ಈ ಓಣಂ ಹಬ್ಬದ ಕೊಡುಗೆ ಎಂಬಂತೆ ಜಿಲ್ಲೆಯ ಕೊಟಿಕುಳಂ ರೈಲ್ವೆ ಮೇಲ್ಸೇತುವೆಯು ನನಸಾಗುವ ಹಾದಿಯಲ್ಲಿದೆ, ಇದರಿಂದಾಗಿ ಜನತೆಯ ದಶಕಗಳ ಕಾಯುವಿಕೆಗೆ ತೆರೆಬೀಳುತ್ತಿದೆ.
ಕೊಟಿಕುಳಂ ರೈಲ್ವೆ ಮೇಲ್ಸೇತುವೆಯ ಡಿ.ಪಿ.ಆರ್.-ಗೆ ಅನುಮೋದನೆ ದೊರೆತಿದೆ ಎಂಬ ಮಾಹಿತಿ ಲಭಿಸಿದೆ. ನಿರ್ಮಾಣ ಕಾರ್ಯಗಳು ಶೀಘ್ರದಲ್ಲೇ ಪ್ರಾರಂಭವಾಗಲಿವೆ. ದಶಕಗಳಿಂದ ಸ್ಥಳೀಯ ನಿವಾಸಿಗಳು ಅನುಭವಿಸುತ್ತಿರುವ ಪ್ರಯಾಣದ ತೊಂದರೆಗಳಿಗೆ ಪರಿಹಾರವಾಗುವ ಈ ಯೋಜನೆಯತ್ತ ನಾವು ಮತ್ತೊಂದು ದೊಡ್ಡ ಹೆಜ್ಜೆಯನ್ನು ಇಟ್ಟಿದ್ದೇವೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್ ತಿಳಿಸಿದ್ದಾರೆ.
ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿ, ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್‌ಜಿ, ರಾಜ್ಯ ಅಧ್ಯಕ್ಷರಾದ ಶ್ರೀ ರಾಜೀವ್ ಚಂದ್ರಶೇಖರ್ಜಿ ಮತ್ತು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಶ್ರೀ ಪಿ. ಕೆ. ಕೃಷ್ಣದಾಸ್‌ಜಿ ಅವರಿಗೆ ಅಶ್ವಿನಿ ಎಂ.ಎಲ್ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
Tags
ಕಾಸರಗೋಡು
