ಕಾಸರಗೋಡು ರೈಲು ನಿಲ್ದಾಣದಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿ 3.084 ಕಿಲೊ ಗಾಂಜಾ ಪತ್ತೆ


 ಕಾಸರಗೋಡು: ಕಾಸರಗೋಡು ರೈಲು ನಿಲ್ದಾಣದಲ್ಲಿ ವಾರಸುದಾರರಿಲ್ಲದೆ ಬಿದ್ದಿದ್ದ 3.084 ಕೆ.ಜಿ ಗಾಂಜಾವನ್ನು ಎಕ್ಸ್ಪ್ರೆಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಓಣಂ ವಿಶೇಷ ಡ್ರೈವ್‌ನ ಭಾಗವಾಗಿ ಶುಕ್ರವಾರದಂದು ಕಾಸರಗೋಡು ರೇಂಜ್ ಎಕ್ಸೈಸ್ ಮತ್ತು ಆರ್‌ಪಿಎಫ್ (RPF) ಜಂಟಿಯಾಗಿ ನಡೆಸಿದ ತಪಾಸಣೆಯ ವೇಳೆ ಈ ಗಾಂಜಾ ಪೊಟ್ಟಣ ಪತ್ತೆಯಾಗಿದೆ. ಇದರ ಮಾಲೀಕರು ಯಾರೆಂದು ಪತ್ತೆಯಾಗಿಲ್ಲ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಮತ್ತು ಎಕ್ಸೈಸ್ ಇಲಾಖೆ ತನಿಖೆ ಆರಂಭಿಸಿದೆ.

ಎಕ್ಸೈಸ್ ಇನ್‌ಸ್ಪೆಕ್ಟರ್ ಟಿ.ಕೆ. ಅಶ್ವಿನ್ ಅವರ ನೇತೃತ್ವದಲ್ಲಿ, ಸಹಾಯಕ ಎಕ್ಸೈಸ್ ಇನ್‌ಸ್ಪೆಕ್ಟರ್ ಅನೀಶ್ ಕುಮಾರ್ ಹಾಗೂ ಸಿಬ್ಬಂದಿಗಳಾದ ಅಭಿಲಾಷ್, ಮೇಮೋಲ್ ಜಾನ್, ಕೆ. ಅಮಲ್‌ಜಿತ್ ಮತ್ತು ಅನೂಪ್ ಈ ತಪಾಸಣಾ ತಂಡದಲ್ಲಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು