ಕಾಸರಗೋಡು: ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತಂದಿದ್ದ 7 ವರ್ಷದ ಬಾಲಕಿ ಮೃತಪಟ್ಟ ಘಟನೆ ನಡೆದಿದೆ. ಮೊಗ್ರಾಲು ಪುತ್ತೂರು ಬಳಿಯ ಮಜಲಿನ ಪ್ರವಾಸಿ ಪ್ರಶಾಂತ್ ಹಾಗೂ ಮಾಳವಿಕ ದಂಪತಿಯ ಪುತ್ರಿ ಅನ್ಷಿಕಾ ಮೃತಪಟ್ಟ ಬಾಲಕಿ.
ಅನಾರೋಗ್ಯ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಶನಿವಾರ ಮುಂಜಾನೆ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ಕರೆತರಲಾಗಿತ್ತಾದರೂ, ಅಷ್ಟರಲ್ಲಿ ಬಾಲಕಿ ಮೃತಪಟ್ಟಿದ್ದಳು. ಕಾಸರಗೋಡು ನಗರ ಪೊಲೀಸರು ಮಹಜರು ನಡೆಸಿದ್ದಾರೆ. ಈಕೆ ಅಪಸ್ಮಾರ (ಮೂರ್ಛೆ ರೋಗ) ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಳು. ಪಾಯಿಚ್ಚಾಲ್ ಚೈತನ್ಯ ವಿದ್ಯಾಲಯದ 2ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಳು. ಮರಣ ವಾರ್ತೆ ತಿಳಿದು ವಿದೇಶದಲ್ಲಿದ್ದ ತಂದೆ ಊರಿಗೆ ಹೊರಟಿದ್ದಾರೆ.
Tags
ಕಾಸರಗೋಡು
