ಕಣ್ಣೂರು: ಕ್ಷೇತ್ರ ಕೊಳದಲ್ಲಿ ಸ್ನಾನಕ್ಕಿಳಿದ ಯುವಕ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಆಲಿನ್‌ಕೀಝಿಲ್ ಕೋಟ್ಟಂಚೇರಿ ನಿವಾಸಿ ಅಜ್ಮಲ್(28) ಮೃತಪಟ್ಟ ಯುವಕ. ಕಣ್ಣೂರು ಕನ್ನಾಡಿಪರಂಬ ಕ್ಷೇತ್ರದ ಕೊಳದಲ್ಲಿ ನಿನ್ನೆ (ಬುದವಾರ) ಸಂಜೆ ಈ ಘಟನೆ ನಡೆದಿದೆ.
ಸ್ನಾನ ಮುಗಿಸಿ ಹಿಂತಿರುಗುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಮತ್ತೆ ಕೊಳಕ್ಕೆ ಬಿದ್ದನೆನ್ನಲಾಗಿದೆ. ಯುವಕನಿಗೆ ಈಜು ಬರುತ್ತಿರಲಿಲ್ಲ. ಅಪಘಾತ ಸಂಭವಿಸಿದ ತಕ್ಷಣವೇ ಸ್ಥಳೀಯರು ಹಾಗೂ ಪಂಚಾಯತ್ ಆಡಳಿತ ಮಂಡಳಿ ಸದಸ್ಯರು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯ ನಡೆಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.
ಮೃತರು ಕಂಬಿಲ್ ಅಮೀನಾ ಕೂಲ್ ಹೋಮ್‌ನ ಮುಹಮ್ಮದ್ ಕುಞಿ ಮತ್ತು ಅಸ್ಮಾ ಬೀವಿ ದಂಪತಿಯ ಪುತ್ರ. ಸಹೋದರರು: ಅಫ್ಸಲ್, ಅಮೀನಾ (ಇಬ್ಬರೂ ವಿದ್ಯಾರ್ಥಿಗಳು).
Tags
ಕಣ್ಣೂರು
