ಕಾಸರಗೋಡು: ಫುಟ್‌ಬಾಲ್ ಪಂದ್ಯದ ವೇಳೆ ರೆಫರಿ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಕುಂಬಳೆ, ಉಳುವಾರು ಬದ್ರಿಯಾ ಮನ್ಸಿಲ್‌ನ ಅಬ್ದುಲ್ಲಾ ಮತ್ತು ಖದೀಜಾ ಅವರ ಪುತ್ರ ಹಸನ್ ಉಳುವಾರು (46) ಮೃತಪಟ್ಟವರು.
ನಿನ್ನೆ (ಬುಧವಾರ) ಸಂಜೆ 6 ಗಂಟೆಯ ವೇಳೆ ಘಟನೆ ನಡೆದಿದೆ. ಫುಟ್‌ಬಾಲ್ ಪಂದ್ಯದಲ್ಲಿ ರೆಫರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಗ ತಲೆಸುತ್ತು ಬಂದಂತಾಗಿ ನೆಲಕ್ಕೆ ಬಿದ್ದಿದ್ದರು. ಕೂಡಲೇ ಅವರನ್ನು ಕುಂಬಳೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ನಂತರ ಮರಣ ಹೊಂದಿದರು.
ಇವರು ಮುಸ್ಲಿಂ ಲೀಗ್ ಸಕ್ರಿಯ ಕಾರ್ಯಕರ್ತರಾಗಿದ್ದರು. ಮೃತರುವಪತ್ನಿ ಸಮೀರಾ, ಪುತ್ರಿ ಖದೀಜಾ ಅನ್ಫಾ, ಸಹೋದರ-ಸಹೋದರಿಯರಾದ ಹುಸೇನ್, ಮೊಹಮ್ಮದ್, ಸವಾದ್, ಸುಹರಾ, ಸುಬೈದಾ, ಅಸ್ಮಾ, ಸುಮ್ಮಯ್ಯ ಎಂಬಿವರನ್ನು ಅಗಲಿದ್ದಾರೆ.
Tags
ಕುಂಬಳೆ
