ತಿರುವನಂತಪುರಂ: ವಿಶ್ವಕಪ್ ಫುಟ್‌ಬಾಲ್ ಫೈನಲ್ ಪಂದ್ಯವನ್ನು ವೀಕ್ಷಿಸಲು ವಿದ್ಯಾರ್ಥಿಗಳಿಗೆ ಸರ್ಕಾರ ಸುವರ್ಣಾವಕಾಶ ಕಲ್ಪಿಸಿದೆ. ಸೋಮವಾರ ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಮುಖ್ಯಮಂತ್ರಿ ರಜೆ ಘೋಷಿಸಿದ್ದಾರೆ. ವೃತ್ತಿಪರ ಕಾಲೇಜುಗಳು ಸೇರಿದಂತೆ ಎಲ್ಲಾ ಸಂಸ್ಥೆಗಳಿಗೂ ಈ ರಜೆ ಅನ್ವಯಿಸಲಿದೆ. ಆದಾಗ್ಯೂ, ಈಗಾಗಲೇ ನಿಗದಿಯಾಗಿರುವ ಪರೀಕ್ಷೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ರಾತ್ರಿ ಇಡೀ ಎಚ್ಚರವಿದ್ದು ಪಂದ್ಯವನ್ನು ವೀಕ್ಷಿಸಿ, ಆಯಾಸದಿಂದ ಮಕ್ಕಳು ಶಾಲೆಗೆ ಬರುವುದನ್ನು ತಪ್ಪಿಸಲು ಈ ರಜೆ ಘೋಷಿಸಲಾಗಿದೆ. ಫೈನಲ್ ಪಂದ್ಯ ನಡೆಯುತ್ತಿರುವುದರಿಂದ ನಾಳೆ ರಜೆ ನೀಡಬೇಕೆಂದು ಮಕ್ಕಳು ಸೇರಿದಂತೆ ಹಲವರು ಒತ್ತಾಯಿಸಿದ್ದರು. ರಜೆ ನೀಡಬೇಕೆಂದು ಯೂತ್ ಕಾಂಗ್ರೆಸ್ ಕೂಡ ಒತ್ತಾಯಿಸಿತ್ತು.
ಇದಕ್ಕೂ ಮುನ್ನ, ಎರ್ನಾಕುಲಂ ಮತ್ತು ಕೋಯಿಕ್ಕೋಡ್ ಜಿಲ್ಲೆಗಳ ವಿವಿಧ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಸೋಮವಾರ ಮುಂಜಾನೆಯ ವೇಳೆಗೆ ಪಂದ್ಯ ಮುಕ್ತಾಯಗೊಳ್ಳಲಿದೆ. ಫೈನಲ್‌ನಲ್ಲಿ ಅರ್ಜೆಂಟೀನಾ ಮತ್ತು ಸ್ಪೇನ್ ಮುಖಾಮುಖಿಯಾಗಲಿವೆ.
Tags
ತಿರುವನಂತಪುರಂ
