ಕಾಞಂಗಾಡ್: ಇಲ್ಲಿನ ವಡಕರೆ ಮುಕ್‌ನಲ್ಲಿ ಉತ್ತರ ಪ್ರದೇಶ ಮೂಲದ ಮಹಿಳೆಯೊಬ್ಬರ ಮೃತದೇಹ ಬಾಡಿಗೆ ಕ್ವಾರ್ಟರ್ಸ್‌ನ ಕೋಣೆಯಲ್ ನಿಗೂಢ ರೀತಿಯಲ್ಲಿ ಪತ್ತೆಯಾಗಿದೆ. ಮೃತರನ್ನು 27 ವರ್ಷದ ಛಮಾ ಎಂದು ಗುರುತಿಸಲಾಗಿದೆ.
ಇಂದು (ಭಾನುವಾರ) ಮುಂಜಾನೆ ಎರಡು ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಮಲಗಿದ್ದ ಪತ್ನಿ ಮಾತನಾಡುತ್ತಿಲ್ಲ ಎಂದು ಪತಿ ಸುನಿಲ್ ತನ್ನ ಸ್ನೇಹಿತನಿಗೆ ಕರೆ ಮಾಡಿ ತಿಳಿಸಿದ್ದನು. ತದನಂತರ ಸ್ನೇಹಿತನೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಯುವತಿಯ ದೇಹದ ಮೇಲೆ ಯಾವುದೇ ಗಾಯದ ಕಲೆಗಳಾಗಲಿ ಅಥವಾ ಗುರುತುಗಳಾಗಲಿ ಇರಲಿಲ್ಲ. ಅನುಮಾನದ ಹಿನ್ನೆಲೆಯಲ್ಲಿ ಪತಿ ಸುನಿಲ್‌ನನ್ನು ಹೊಸದುರ್ಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Tags
ಕಾಞಂಗಾಡ್
