ಗ್ರಾಮ ಪಂಚಾಯತು ಬಿಜೆಪಿ ಸದಸ್ಯರ ವಿಶೇಷ ಕಾಳಜಿ; ಎಪ್ಪತ್ತು ವರ್ಷದ ಪಳ್ಳತ್ತಡ್ಕ ಮಹಾಲಿಂಗ ಮಣಿಯಾಣಿಯವರಿಗೆ ಕೊನೆಗೂ ಪೆನ್ಶನ್ ಲಭಿಸಿತು


 ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯತಿನ 8 ನೇ ವಾರ್ಡು ವ್ಯಾಪ್ತಿಯ ಪಳ್ಳತ್ತಡ್ಕ ನಿವಾಸಿ ಮಹಾಲಿಂಗ‌ ಮಣಿಯಾಣಿ(70) ಅವರಿಗೆ ಕೊನೆಗೂ ಪೆನ್ಶನ್ ಲಭಿಸಿದೆ. ಗ್ರಾಮ ಪಂಚಾಯತಿನ ಅಧಿಕೃತ ಮಾಹಿತಿಯನ್ನು ಗ್ರಾಮ‌ಪಂಚಾಯತು ಸದಸ್ಯೆ ಉಷಾ ಅವರು ಇಂದು (ಶುಕ್ರವಾರ)  ಮಹಾಲಿಂಗ ಮಣಿಯಾಣಿ ಅವರಿಗೆ  ಹಸ್ತಾಂತರಿಸಿದರು.

    ಮಹಾಲಿಂಗ ಮಣಿಯಾಣಿ ಅವರು ಪೆನ್ಶನ್ ಲಭಿಸಲು ಕಳೆದ ಐದು ವರ್ಷಗಳಿಂದ ಪ್ರಯತ್ನಿಸಿದ್ದರು. ಆದರೆ ಇವರ ಅರ್ಜಿಯನ್ನು ಪಡೆದ ಸ್ಥಳೀಯ ಲೀಗ್ ನೇತಾರನೋರ್ವ ಅದನ್ನು ಗ್ರಾಮ ಪಂಚಾಯತಿಗೆ ನೀಡಿರಲಿಲ್ಲ. ಇದರಿಂದಾಗಿ ಮಹಾಲಿಂಗ ಮಣಿಯಾಣಿ ಅವರು ಪೆನ್ಶನ್ ಸಿಗದೆ ವಂಚಿತರಾಗಿದ್ದರು.‌ ಕಳೆದ ಪಂಚಾಯತು ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ದಿಸಿ ವಿಜೇತರಾದ ಉಷ ಅವರು ಈ ಬಗ್ಗೆ ಮುತುವರ್ಜಿ ವಹಿಸಿದರು. ನೂತನ ಅರ್ಜಿ‌ ಸಲ್ಲಿಸಲಾಯಿತು.ಇದರಿಂದಾಗಿ ಮಹಾಲಿಂಗ ಮಣಿಯಾಣಿ ಅವರಿಗೆ ಪೆನ್ಶನ್ ಲಭಿಸುವಂತಾಯಿತು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು