ಮುಳ್ಳೇರಿಯ: ಕಾರಡ್ಕ ಗ್ರಾಮ ಪಂಚಾಯತ್ ಕುಟುಂಬ ಆರೋಗ್ಯ ಕೇಂದ್ರ ಮುಳ್ಳೇರಿಯಾದ ನೇತೃತ್ವದಲ್ಲಿ, ಮಳೆಗಾಲದ ಪೂರ್ವ ಸ್ವಚ್ಛತೆ ಮತ್ತು ಸಾಂಕ್ರಾಮಿಕ ರೋಗ ಪ್ರತಿರೋಧ ಕಾರ್ಯಕ್ರಮಗಳ ಅಂಗವಾಗಿ ವಾರ್ಡ್ ಮಟ್ಟದ ಸ್ವಚ್ಛತಾ ಸಮಿತಿ ಸಭೆಯಲ್ಲಿ ಸ್ಕ್ವಾಡ್‌ಗಳನ್ನು ರಚಿಸಿ ಎಲ್ಲಾ ಮನೆಗಳಿಗೆ ನೋಟಿಸ್ ವಿತರಿಸಲಾಗಿತ್ತು.
ಕಾರ್ಯಕ್ರಮದ ನಾಲ್ಕನೇ ಹಂತದ ಭಾಗವಾಗಿ, ಸಬ್ ಸೆಂಟರ್‌ಗಳನ್ನು ಕೇಂದ್ರೀಕರಿಸಿ ಕಳೆದ ವರ್ಷಗಳಲ್ಲಿ ಸಾಂಕ್ರಾಮಿಕ ರೋಗಗಳು ಪತ್ತೆಯಾದ ಸ್ಥಳಗಳಲ್ಲಿ (ಹಾಟ್‌ಸ್ಪಾಟ್) ವಾರ್ಡ್ ಸದಸ್ಯರು, ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರ ನೇತೃತ್ವದಲ್ಲಿ ರೋಗದ ಮೂಲಗಳ ನಾಶ ಹಾಗೂ ಜಾಗೃತಿ ನೋಟಿಸ್ ವಿತರಣೆಯನ್ನು ನಡೆಸಲಾಯಿತು.
ಮುಳ್ಳೇರಿಯಾ ಮೇನ್ ಸೆಂಟರ್ ವ್ಯಾಪ್ತಿಯ ನೆಲ್ಲಿಯಡ್ಕದಲ್ಲಿ ನಡೆದ ಕ್ಯಾಂಪೇನ್ ಅನ್ನು ಒಂದನೇ ವಾರ್ಡ್ ಸದಸ್ಯರಾದ ಶ್ರೀ ಪ್ರಶಾಂತ್ ಉದ್ಘಾಟಿಸಿದರು. ಸದಸ್ಯರ ನೇತೃತ್ವದಲ್ಲಿ ಐದು ತಂಡಗಳಾಗಿ ವಿಂಗಡಿಸಿ, ಒಂದು ತಂಡಕ್ಕೆ 25 ಮನೆಗಳಂತೆ ಒಟ್ಟು 125 ಮನೆಗಳನ್ನು ಕೇಂದ್ರೀಕರಿಸಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
