ಮವ್ವಾರು: ಕುಂಬ್ಡಾಜೆ ಗ್ರಾಮಪಂಚಾಯತು, ಕುಟುಂಬ ಆರೋಗ್ಯ ಕೇಂದ್ರ, ಆಯುಷ್ ಪ್ರಾಥಮಿಕ ಆರೋಗ್ಯ ಕೇಂದ್ರದ ಜಂಟಿ ಆಶ್ರಯದಲ್ಲಿ ಹೋಮಿಯೋಪತಿ ಮತ್ತು ಸಾಂಕ್ರಾಮಿಕವಲ್ಲದ ರೋಗಗಳ ತಪಾಸಣೆ, ವೈದ್ಯಕೀಯ ಶಿಬಿರವು ಮವ್ವಾರು ಷಡಾನನ ಗ್ರಂಥಾಲಯದಲ್ಲಿ ಜರಗಿತು.
ಕಾರ್ಯಕ್ರಮವನ್ನು ಕುಂಬ್ಡಾಜೆ ಗ್ರಾಮ ಪಂಚಾಯತು ಅಧ್ಯಕ್ಷೆ ಯಶೋಧ ಉದ್ಘಾಟಿಸಿದರು. ಗ್ರಾಮ ಪಂಚಾಯತು ಉಪಾಧ್ಯಕ್ಷ ರವೀಂದ್ರ ರೈ ಗೋಸಾಡ ಅಧ್ಯಕ್ಷತೆ ವಹಿಸಿದರು. ಆರೋಗ್ಯ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರಿಯಾಂಕ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕುಂಬ್ಡಾಜೆ ವೈದ್ಯಾಧಿಕಾರಿ ಡಾ. ಐಶ್ವರ್ಯ.ಕೆ, ಮುಳಿಯಾರು ವೈದ್ಯಾಧಿಕಾರಿ ಅಶ್ವಿನಿ.ಕೆ.ವಿ, ಆರೋಗ್ಯ ನಿರ್ದೇಶಕ ಸುರೇಶ್ ಕುಮಾರ್ ಮೊದಲಾದವರು ವಿವಿದ ವಿಷಯಗಳ ಕುರಿತು ಉಪಾನ್ಯಾಸ ನೀಡಿದರು.
Tags
ಕುಂಬ್ಡಾಜೆ


