ಕಾಸರಗೋಡು: ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆ ನಡೆಯಿತು.ಕಲೆಕ್ಟರೇಟ್ ಮುಖ್ಯ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ವಹಿಸಿದ್ದರು.
ಜಿಲ್ಲೆಯ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು ಮತ್ತು ಕಾಮಗಾರಿಗಳನ್ನು ತ್ವರಿತಗೊಳಿಸಲು ಸೂಚನೆಗಳನ್ನು ನೀಡಲಾಯಿತು. ಸಂಸದ ರಾಜ್‌ಮೋಹನ್ ಉನ್ನಿತ್ತಾನ್, ಶಾಸಕ ಎ.ಕೆ.ಎಮ್. ಅಶ್ರಫ್, ಕಲ್ಲಟ್ರ ಮಾಹಿನ್, ಕೆ. ನೀಲಕಂಠನ್, ಗೋವಿಂದನ್ ಪಲ್ಲಿಕ್ಕಾಪ್ಪಿಲ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಅಬ್ರಹಾಂ, ನಗರಾಡಳಿತದ ಅಧ್ಯಕ್ಷರಾದ ಪಿ.ಪಿ. ಮುಹಮ್ಮದ್ ರಾಫಿ ಹಾಗೂ ಶಾಹಿನಾ ಸಲೀಂ ಭಾಗವಹಿಸಿದ್ದರು. ಉಸ್ತುವಾರಿ ಜಿಲ್ಲಾ ಯೋಜನಾಧಿಕಾರಿ ಸಿ.ಎಮ್. ಸುಧೀಶ್ ಸ್ವಾಗತಿಸಿದರು. ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
Tags
ಕಾಸರಗೋಡು

