ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಬದಿಯಡ್ಕ ಗ್ರಾಮ ಪಂಚಾಯತಿನ 7ನೇ ವಾರ್ಡು ಕಾಂಗ್ರೆಸ್ ಸಮಿತಿಯ ಸಮಾವೇಶವನ್ನು ಬಣ್ಪುತಡ್ಕದಲ್ಲಿ ನಡೆಸಲಾಯಿತು.
ಕಾಂಗ್ರೆಸ್ ವಾರ್ಡು ಸಮಿತಿ ಅಧ್ಯಕ್ಷ ಸತೀಶ್ ಸಿರ್ಯಾಕ್ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಶ್ಯಾಮ ಪ್ರಸಾದ್ ಮಾನ್ಯ ಅವರು ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಾ ಇದೀಗ ರಾಜ್ಯದಲ್ಲಿ ಯುಡಿಎಫ್ ಸರಕಾರ ಆಡಳಿತದಲ್ಲಿದೆ, ಸರಕಾರ ಪ್ರಕಟಿಸುವ ಸವಲತ್ತುಗಳನ್ನು ವಾರ್ಡಿನ ಪ್ರತಿ ದಿಕ್ಕುಗಳಿಗೂ ತಲುಪಿಸುವ ಕಾರ್ಯವನ್ನು ವಾರ್ಡು ಕಾಂಗ್ರೆಸ್ ಸಮಿತಿಯ ಕಾರ್ಯಕರ್ತರು ಮಾಡಬೇಕು ಮತ್ತು ವಾರ್ಡಿನ ಸಮಗ್ರ ಅಭಿವೃದ್ಧಿಗೆ ಕಾರ್ಯಕರ್ತರು ಶ್ರಮಿಸಬೇಕೆಂದು ಕರೆ ನೀಡಿದರು. ಸಮಾವೇಶದಲ್ಲಿ ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಮನೋಜ್ ವಾಂತಿಚ್ಚಾಲ್ ಅವರನ್ನು ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಪಕ್ಷದ ಶಾಲು ಹಾಕಿ ಸ್ವಾಗತಿಸಿದರು. ವಾರ್ಡು ಸದಸ್ಯೆ ಲೀಲಾವತಿ ಕುಂಟಾಲು ಮೂಲೆ , ಯೂತು ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಶ್ರೀನಾಥ್ ಬದಿಯಡ್ಕ, ಮಂಡಲ ಕಾರ್ಯದರ್ಶಿ ರವೀಂದ್ರ ಕುಂಟಾಲು ಮೂಲೆ ಮಾತನಾಡಿದರು. ನೇತಾರರಾದ ಅಬೂಬಕ್ಕರ್ ಬಣ್ಪುತ್ತಡ್ಕ, ರಾಮ ನಾಯ್ಕ್ ಕುಂಟಾಲು ಮೂಲೆ , ವಾಮನ ನಾಯ್ಕ್ ಚುಕ್ಕಿನಡ್ಕ , ಸುಂದರ ಮುನ್ಚಿಕಾನ, ಸವಾದ್ ಬಣ್ಪುತ್ತಡ್ಕ ಮೊದಲಾದವರು ಉಪಸ್ಥಿತರಿದ್ದರು.