ಪ್ರಧಾನಮಂತ್ರಿಗಳಿಗೆ ಅವಮಾನ; ಕೇರಳದ ಮಂಗಳಮುಖಿ ಜಾನ್ ಮನಿ ವಿರುದ್ದ ಕುಂಬಳೆ ಪೊಲೀಸರಿಗೆ ದೂರು ನೀಡಿದ ಬಿಜೆಪಿ


 ಕುಂಬಳೆ:ದೇಶದ ಕಾವಲುಗಾರ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ ಕೇರಳದ ಮಂಗಳಮುಖಿ ಜಾನ್ ಮನಿ ಎಂಬವನ ವಿರುದ್ಧ ಕುಂಬ್ಳೆ ಪೊಲೀಸ್ ಠಾಣೆಯಲ್ಲಿ ಬಿಜೆಪಿ ನಾಯಕರು ಹಾಗೂ ಸ್ವಯಂಸೇವಕರು ದೂರನ್ನು ದಾಖಲಿಸಿದರು..

ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಮತ್ತು ಅವರ ತಾಯಿಯನ್ನು ಅತ್ಯಂತ ಕೀಳಾಗಿ ಅವಹೇಳನ ಮಾಡಿದ ಕೇರಳದ  ಜಾನ್‌ಮನಿ ಎಂಬ ಮಂಗಳಮುಖಿ ಮೇಕಪ್ ಆರ್ಟಿಸ್ಟ್ ‌ನ ವಿರುದ್ಧ ಬಿಜೆಪಿ ಕುಂಬ್ಳೆ ಮಂಡಲ ಕಾರ್ಯದರ್ಶಿ ಶ್ರೀ ಪ್ರದೀಪ್ ಕುಮಾರ್ ಅವರು ಕುಂಬ್ಳೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ.ಬಾಲಗೋಕುಲ ಮಂಜೇಶ್ವರ ತಾಲೂಕು ಉಪಾಧ್ಯಕ್ಷರಾದ ಶ್ರೀ ಮಧುಸೂಧನ್ ಆಚಾರ್ಯ,ಮಾಜಿ ಪಂಚಾಯತ್ ಸದಸ್ಯರಾದ ಮೋಹನ ಕೆ ಬಂಬ್ರಾಣ, ಸ್ವಯಂಸೇವಕರಾದ ಶ್ರೇಯಸ್ ಉಜಾರು, ಪ್ರಸಾದ್,ಮಂಜುನಾಥ ರೈ,ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು