ಬದಿಯಡ್ಕ : ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಗೆದುರಾಗಿ ನಡೆಸಿದ ಸಮರದಲ್ಲಿ ಲೋಕ ಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಲೋಕ ಸಭಾ ಸದಸ್ಯರನ್ನು ಬಂಧಿಸಿದ ಕೇಂದ್ರ ಸರಕಾರಕ್ಕೆದುರಾಗಿ ಬದಿಯಡ್ಕದಲ್ಲಿ ಪ್ರತಿಷೆೇಧ ಜಾಥಾ ನಡೆಸಲಾಯಿತು. ನಂತರ ನಡೆದ ಪ್ರತಿಷೇಧ ಸಭೆಯ ಅಧ್ಯಕ್ಷತೆಯನ್ನು ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ಯಾಮ ಪ್ರಸಾದ ಮಾನ್ಯ ವಹಿಸಿದ್ದರು. ಕಾರಡ್ಕ ಬ್ಲೋಕು ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ನಾರಾಯಣ ಮಣಿಯಾಣಿ ನೀರ್ಚಾಲು ಉದ್ಘಾಟಿಸಿದರು. ಕಾರಡ್ಕ ಬ್ಲೋಕು ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರೂ ಪಂಚಾಯತು ಸದಸ್ಯರು ಆದ ಗಂಗಾಧರ ಗೋಳಿಯಡ್ಕ, ಯೂತು ಕಾಂಗ್ರೆಸ್ ಜಿಲ್ಲಾ ಸಮಿತಿ ಕಾರ್ಯದರ್ಶಿ ಶ್ರೀನಾಥ್ ಬದಿಯಡ್ಕ , ಮಾತನಾಡಿದರು. ಹಿರಿಯ ಕಾಂಗ್ರೆಸ್ ನೇತಾರ ಚಂದ್ರಹಾಸ ರೈ , ಮಂಡಲ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರುಗಳಾದ ಜಗನ್ನಾಥ ರೈ, ಕೃಷ್ಣದಾಸ್ ದರ್ಬೆತ್ತಡ್ಕ , ಬ್ಲೋಕು ಕಾಂಗ್ರೆಸ್ ಸಮಿತಿ ಕಾರ್ಯದರ್ಶಿಗಳಾದ ರಾಮ ಪಟ್ಟಾಜೆ, ಶಾಫಿ ಗೋಳಿಯಡ್ಕ ಮಂಡಲ ಕಾರ್ಯದರ್ಶಿಗಳಾದ ಲೋಹಿತಾಕ್ಷನ್ ನಾಯರ್ , ರವೀಂದ್ರ ಕುಂಟಾಲು ಮೂಲೆ , ರಾಮಕೃಷ್ಣನ್ , ಶಾಫಿ ಗೋಳಿಯಡಿ, ಕೋಶಾಧಿಕಾರಿ ಕುಮಾರನ್ ನಾಯರ್ ,ಯೂತು ಕಾಂಗ್ರೆಸ್ ಬದಿಯಡ್ಕ ಮಂಡಲ ಸಮಿತಿ ಅಧ್ಯಕ್ಷ ಕೃಷ್ಣ ಕುಮಾರ್ ಮಂಡಲ , ವಾರ್ಡು ಕಾಂಗ್ರೆಸ್ ಸಮಿತಿಯ ನೇತಾರರಾದ ಸಿರಿಲ್ ಡಿ'ಸೋಜ, ಗೋಪಾಲ ದರ್ಬೆತ್ತಡ್ಕ, ರಾಮ ಗೋಳಿಯಡ್ಕ, ಮೊಹಮ್ಮದ್ ಪಯ್ಯಲಡ್ಕ, ಮೊಹಮ್ಮದ್ ಅರಮನೆ , ಸತೀಶ ಪೆರುಮುಂಡ, ನಿಜೀಷ್ , ಸವಾದ್ ಬಣ್ಪುತ್ತಡ್ಕ, ಬೆಂಜಮಿನ್ ಕ್ರಾಸ್ತ , ವಿನ್ಸಂಟ್ ಮೊದಲಾದವರು ನೇತೃತ್ವ ನೀಡಿದರು.
Tags
ಬದಿಯಡ್ಕ
