ಬದಿಯಡ್ಕ ಗ್ರಾಮಪಂಚಾಯಿತು ಕುಟುಂಬಶ್ರೀ ಕೆಸರು ಗದ್ದೆ ಸಂಭ್ರಮ


 ಬದಿಯಡ್ಕ: ಪ್ರಕೃತಿಯ ಮಡಿಲಲ್ಲಿ ಮಣ್ಣಿನ ಸವಿಯನ್ನು ಅನುಭವಿಸುತ್ತಾ, ಗ್ರಾಮೀಣ ಸಾಂಸ್ಕೃತಿಕ ಪರಂಪರೆಯನ್ನು ಹಾಗೂ ಒಗ್ಗಟ್ಟನ್ನು ಮತ್ತೆ ನೆನಪಿಸುವ ಕಾರ್ಯಕ್ರಮಗಳು ಇಂದಿನ ಅಗತ್ಯವಾಗಿದೆ ಎಂದು ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ ಡಿ. ಅಭಿಪ್ರಾಯಪಟ್ಟರು.


ಬದಿಯಡ್ಕ ಗ್ರಾಮ ಪಂಚಾಯಿತಿ ಕುಟುಂಬಶ್ರೀ ಮೋಡೆಲ್ ಸಿಡಿಎಸ್ ವತಿಯಿಂದ ಬುಧವಾರ ಪಳ್ಳತ್ತಡ್ಕ ಗದ್ದೆಯಲ್ಲಿ ಆಯೋಜಿಸಲಾದ `ಕೆಸರುಗದ್ದೆಯಲ್ಲಿ ಸಂಭ್ರಮ' (ಮಳಪೊಲಿಮ) ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.


ಕುಟುಂಬಶ್ರೀಯು ಮಹಿಳೆಯರ ಸಬಲೀಕರಣಕ್ಕೆ ಮಾತ್ರವಲ್ಲದೆ, ಗ್ರಾಮೀಣ ಸೌಹಾರ್ದತೆ ಮತ್ತು ಒಗ್ಗಟ್ಟನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಪಂಚಾಯಿತಿ ವ್ಯಾಪ್ತಿಯ ಎಲ್ಲ ಕುಟುಂಬಶ್ರೀ ಸದಸ್ಯರ ಈ ಉತ್ಸಾಹ ಶ್ಲಾಘನೀಯ ಎಂದರು. ವಾರ್ಡು ಸದಸ್ಯೆ ಉಷಾ ಪಳ್ಳತ್ತಡ್ಕ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ. ಮಾತನಾಡಿ ಕೃಷಿ ಭೂಮಿ ಕೇವಲ ಬೆಳೆ ತೆಗೆಯುವ ಸ್ಥಳವಲ್ಲ, ಅದು ನಮ್ಮ ಸಂಸ್ಕೃತಿ ಮತ್ತು ಜೀವನಾಡಿಯಾಗಿದೆ. ಆಧುನಿಕ ಜೀವನಶೈಲಿಯಲ್ಲಿ ಮಣ್ಣಿನಿಂದ ದೂರವಾಗುತ್ತಿರುವ ಇಂದಿನ ಪೀಳಿಗೆಗೆ ಇಂತಹ ಕೆಸರು ಗದ್ದೆ ಕಾರ್ಯಕ್ರಮಗಳು ನಮ್ಮ ಬೇರುಗಳನ್ನು ಮತ್ತೆ ನೆನಪಿಸುತ್ತವೆ ಎಂದರು. ಬ್ಲೋಕ್ ಪಂಚಾಯಿತಿ ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್.ಮೊಯ್ದು ಗೋಳಿಯಡ್ಕ, ಗ್ರಾಮಪಂಚಾಯಿತಿ ಅಭಿವೃದ್ಧಿ ಸ್ಥಾಯಿಸಮಿತಿ ಅಧ್ಯಕ್ಷ ಹಮೀದ್ ಕೆಡೆಂಜಿ, ಕ್ಷೇಮಕಾರ್ಯ ಸ್ಥಾಯಿಸಮಿತಿ ಅಧ್ಯಕ್ಷೆ ರಜನಿ ಜಿ.ಆರ್., ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿಸಮಿತಿ ಅಧ್ಯಕ್ಷ ಅವಿನಾಶ್ ರೈ, ಬ್ಲೋಕ್ ಪಂಚಾಯಿತಿ ಸದಸ್ಯರುಗಳಾದ ಮಹೇಶ್ ವಳಕ್ಕುಂಜ, ಖಾದರ್ ಮಾನ್ಯ, ಗ್ರಾಮಪಂಚಾಯಿತಿ ಸದಸ್ಯರುಗಳಾದ ಬಾಲಕೃಷ್ಣ ಶೆಟ್ಟಿ ಕೆ., ಶ್ಯಾಮಪ್ರಸಾದ ಮಾನ್ಯ, ಗಂಗಾಧರ ಗೋಳಿಯಡ್ಕ, ಹರೀಶ ಕೆ., ಮಧುಸೂದನ ಕಂಗಿಲ, ಶ್ಯಾಮಪ್ರಸಾದ ಸರಳಿ, ಲೀಲಾವತಿ, ಪ್ರಜ್ಞಾ, ಗ್ರಾಮಪಂಚಾಯಿತಿ ಸಹಾಯಕ ಕಾರ್ಯದರ್ಶಿ ಸಜಿ, ಸಿಡಿಎಸ್‌ನ ಉಪಾಧ್ಯಕ್ಷೆ  ಜಯಂತಿ ಕುಂಟಿಕಾನ, ಉದನೇಶ್ವರ ಬದಿಯಡ್ಕ, ಸ್ಥಳದಾನಿ ಸುರೇಶ್ ಭಟ್ ಪಳ್ಳತ್ತಡ್ಕ, ಸ್ಥಳೀಯ ಕೃಷಿಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಿಡಿಎಸ್ ಅಧ್ಯಕ್ಷೆ ಸುಲೋಚನ ಸ್ವಾಗತಿಸಿ, ಮಿನಿ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು