ರಾಷ್ಟ್ರೀಯ ವಯೋಶ್ರೀ ಯೋಜನೆ; ಮುಳ್ಳೇರಿಯಾದಲ್ಲಿ ನೋಂದಣಿ ಶಿಬಿರ


 ಪ್ರಧಾನಮಂತ್ರಿ ದಿವ್ಯಾಂಗ ಕೇಂದ್ರ, ಬಿಜೆಪಿ ಕಾಸರಗೋಡು ಜಿಲ್ಲಾ ಹೆಲ್ಪ್‌ಡೆಸ್ಕ್ ಹಾಗೂ ಬಿಜೆಪಿ ಬದಿಯಡ್ಕ ಮಂಡಲ ಸಮಿತಿ ಜಂಟಿಯಾಗಿ ಮುಳ್ಳೇರಿಯ ಗಣೇಶ ಕಲಾಮಂದಿರದಲ್ಲಿ ಆಯೋಜಿಸಿದ್ದ 'ರಾಷ್ಟ್ರೀಯ ವಯೋಶ್ರೀ ಯೋಜನೆ'ಯ ನೋಂದಣಿ ಶಿಬಿರವನ್ನು ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷರಾದ ಅಶ್ವಿನಿ ಎಂ.ಎಲ್. ಉದ್ಘಾಟಿಸಿದರು.

ಹಿರಿಯ ನಾಗರಿಕರಿಗೆ ಐದು ಲಕ್ಷ ರೂಪಾಯಿ ಆರೋಗ್ಯ ಭದ್ರತೆ ಒದಗಿಸುವ ಆಯುಷ್ಮಾನ್ ಭಾರತ್ ಯೋಜನೆಯನ್ನು ಕೇರಳದಲ್ಲಿ ಜಾರಿಗೊಳಿಸಲು ಇದುವರೆಗೆ ಮುಂದಾಗದಿರುವುದು ಹಿರಿಯ ನಾಗರಿಕರಿಗೆ ಎಸಗುತ್ತಿರುವ ಸವಾಲಾಗಿದೆ.


ಬಿಜೆಪಿ ಬದಿಯಡ್ಕ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಎಂ. ಅಧ್ಯಕ್ಷತೆ ವಹಿಸಿದ್ದರು.


ದಿವ್ಯಾಂಗ ಕೇಂದ್ರವನ್ನು ಪ್ರತಿನಿಧಿಸಿ ಡಾ. ಗೋಕುಲ್, ಅಭಿನವ್, ಆಡಿಯಾಲಜಿಸ್ಟ್ ಡಾ. ಮಧುಶ್ರೀ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ಬದಿಯಡ್ಕ ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀಧರ ಬೆಳ್ಳೂರು, ಕಾರಡ್ಕ ಪಂಚಾಯತ್ ಸಮಿತಿ ಅಧ್ಯಕ್ಷ ವಸಂತ ಕೆ., ಬೆಳ್ಳೂರು ಪಂಚಾಯತ್ ಸಮಿತಿ ಅಧ್ಯಕ್ಷ ರವೀಂದ್ರನಾಥ್ ಶೆಟ್ಟಿ, ಕಾರಡ್ಕ ಪಂಚಾಯತ್ ಕಾರ್ಯದರ್ಶಿ ರತ್ನಾಕರ ರಾವ್ ಮಾತನಾಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು