ಚೆರ್ಕಳ- ಅಡ್ಕಸ್ಥಳ ರಸ್ತೆಯಲ್ಲಿ ಆಳವಾದ ಕಂದಕ ಸೃಷ್ಠಿ; ಸಂಕಷ್ಟದಲ್ಲಿ ವಾಹನ ಚಾಲಕರು


 ಬದಿಯಡ್ಕ: ಚೆರ್ಕಳ- ಉಕ್ಕಿನಡ್ಕ ರಸ್ತೆ ಮತ್ತೆ ಹೊಂಡಮಯವಾಗಿದ್ದು ವಾಹನ ಸಂಚಾರವೇ ದುಸ್ತರವೆನಿಸಿದೆ. ರಸ್ತೆಯ ಅಲ್ಲಲ್ಲಿ ಭಾರೀ ಹೊಂಡಗಳು ಸೃಷ್ಟಿಯಾಗಿದ್ದು ವಾಹನಗಳಿಗೆ ಮಾತ್ರವಲ್ಲ.. ನಡೆದಾಡಲು ಸಹ ಆಗದಂತಹ ಸ್ಥಿತಿಯೊದಗಿದೆ.

      ಚೆರ್ಕಳ- ಅಡ್ಕಸ್ಥಳ ಅಂತರಾಜ್ಯ ರಸ್ತೆ ಕಾಮಗಾರಿಗೆ  ರಾಜ್ಯ ಸರಕಾರವು ನಿಧಿ ಮಂಜೂರು ಮಾಡಿತ್ತು. ಅದರ ಜತೆಗೆ ಟೆಂಡರ್ ಪ್ರಕ್ರಿಯೆಯೂ ಪೂರ್ಣಗೊಂಡಿತ್ತು.  ಈ ಮಧೈ ಟೆಂಡರ್ ಪಡೆದ ಕಂಪನಿ ರಸ್ತೆಯ ಹೊಂಡಗಳನ್ನು ಮುಚ್ಚಿ ವಾಹನ ಸಂಚಾರಕ್ಕೆ ಅನುವು ಮಾಡಿತ್ತು. ಆದರೆ ಒಂದೆರಡು ಮಳೆ ಬಂದಾಗಲೇ ಈ ಹೊಂಡಗಳು ಬಾಯಿ ತೆರೆದಿವೆ.  ಹೊಂಡಗಳಲ್ಲಿ ನೀರು ತುಂಬಿಕೊಂಡಿದ್ದು ದ್ವಿಚಕ್ರ ವಾಹನಗಳು ಅಫಘಾತಕ್ಕೀಡಾಗುವ ಘಟನೆ ಹೆಚ್ಚುತ್ತಿದೆ. ಲೋಕೋಪಯೋಗಿ ಇಲಾಖೆ ಹಾಗೂ ಸಂಬಂಧಪಟ್ಟ ಜನಪ್ರತಿನಿಧಿಗಳು ನಿದ್ದೆಯಿಂದೆದ್ದು ಈ ಬಗ್ಗೆ ತುರ್ತು ಗಮನ ಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು