ಉಕ್ರೇನ್ ಹಡಗಿನ ಮೇಲೆ ರಷ್ಯಾ ನಡೆಸಿದ ದಾಳಿಯಲ್ಲಿ ಕಾಸರಗೋಡು ನಿವಾಸಿ ಸಹಿತ 10 ಮಂದಿ ಸಾವು


 ಕೀವ್: ಉಕ್ರೇನ್‌ನ ಒಡೆಸ್ಸಾ ಕರಾವಳಿಯಲ್ಲಿ ಸರಕು ಸಾಗಣೆ ಹಡಗಿನ ಮೇಲೆ ರಷ್ಯಾ ನಡೆಸಿದ ದಾಳಿಯಲ್ಲಿ ಕಾಸರಗೋಡು ನಿವಾಸಿ ಸೇರಿದಂತೆ 10 ಮಂದಿ ಸಾವನ್ನಪ್ಪಿದ್ದಾರೆ. ಕಾಸರಗೋಡು ವೆಳ್ಳರಿಕುಂಡು ಎಕೆಜಿ ನಗರದ ನಿವಾಸಿ ವಾಲಿಪ್ಲಾಕ್ಕಲ್ ಅಖಿಲ್ ಜೋಯನ್ (26) ಮೃತಪಟ್ಟವರು. ಗಿನಿ-ಬಿಸೌ ಧ್ವಜ ಹೊಂದಿದ್ದ ಹಡಗಿನ ಮೇಲೆ ರಷ್ಯಾ ಕ್ರೂಸ್ ಕ್ಷಿಪಣಿ ದಾಳಿ ನಡೆಸಿದೆ ಎಂದು ಉಕ್ರೇನ್ ವಾಯುಪಡೆ ತಿಳಿಸಿದೆ. ಹಡಗಿನಲ್ಲಿ ಭಾರತೀಯ ಮತ್ತು ಸಿರಿಯನ್ ನಾವಿಕರಿದ್ದರು. 'ಗೋಲ್ಡನ್ ಲಿಯೋ' ಎಂಬ ಹಡಗಿನ ಮೇಲೆ ದಾಳಿ ನಡೆದಿದೆ. 8 ಜನರನ್ನು ರಕ್ಷಿಸಲಾಗಿದೆ ಎಂದು ಉಕ್ರೇನ್ ನೌಕಾಪಡೆ ತಿಳಿಸಿದೆ. ಇದಲ್ಲದೆ ಉಕ್ರೇನ್ ಮೂಲದ ಪೈಲಟ್ ಕೂಡ ಮೃತಪಟ್ಟಿದ್ದಾರೆ.

ಎಕೆಜಿ ನಗರದ ಜೋಯಲ್ ಮತ್ತು ಸಾಲಿ ದಂಪತಿಯ ಪುತ್ರ ಅಖಿಲ್ ಜೋಯಲ್. ಹತ್ತೊಂಬತ್ತನೇ ವಯಸ್ಸಿನಲ್ಲಿ ಹಡಗಿನಲ್ಲಿ ಕೆಲಸಕ್ಕೆ ಸೇರಿದ ಜೋಯಲ್ ಅವರು ಅತ್ಯುತ್ತಮ ಹಗ್ಗಜಗ್ಗಾಟ (ಟಗ್ ಆಫ್ ವಾರ್) ಆಟಗಾರರೂ ಆಗಿದ್ದರು. ಒಂದು ತಿಂಗಳ ಹಿಂದೆ ರಜೆಯ ಮೇಲೆ ಊರಿಗೆ ಬಂದು ವಿವಾಹ ನಿಶ್ಚಯದ ನಂತರ ಹಿಂತಿರುಗಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು