ಕ್ಯಾಂಪ್ಕೋ ಸದಸ್ಯರ ಶೈಕ್ಷಣಿಕ ಸಹಾಯ ನಿಧಿ ಯೋಜನೆ; ಅಂಬಲತ್ತರದ ಸಕ್ರಿಯ ಸದಸ್ಯರ ಪುತ್ರಿಗೆ‌ ಮೊದಲ ಕಂತಿನ ನೆರವು ಹಸ್ತಾಂತರ


 ಕಾಸರಗೋಡು : ಕ್ಯಾಂಪ್ಕೋ ಸದಸ್ಯರ ಶೈಕ್ಷಣಿಕ ಸಹಾಯ ನಿಧಿ ಯೋಜನೆಯಡಿ ಉನ್ನತ ಶಿಕ್ಷಣ ವೆಚ್ಚಕ್ಕಾಗಿ ಅಂಬಲತ್ತರದ ಸದಸ್ಯರಾದ ಕುಞಿಕಣ್ಣ ಪಿ. ವಿ.  ಅವರ ಪುತ್ರಿ ಕುಮಾರಿ ನಂದನಾ ವಿ. ಪಿ. ಅವರಿಗೆ ಮೊದಲ ಕಂತಿನ ರೂ.50,000 ಶಿಕ್ಷಣ ನೆರವು ಚೆಕ್ ವಿತರಿಸಲಾಯಿತು.

ಈ ಚೆಕ್ ಅನ್ನು ಕ್ಯಾಂಪ್ಕೋದ  ನಿರ್ದೇಶಕರಾದ ರಾಧಾಕೃಷ್ಣನ್ ಕೆ., ಗಣೇಶ್ ಪಾರಕ್ಕಟ್ಟೆ ಹಾಗೂ ವಿವೇಕಾನಂದ ಗೌಡ ಪಿ. ಅವರು ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ಕ್ಯಾಂಪ್ಕೋ ಬದಿಯಡ್ಕ ಪ್ರಾದೇಶಿಕ ವ್ಯವಸ್ಥಾಪಕ ಚಂದ್ರ ಎಂ. ಹಾಗೂ ಕ್ಯಾಂಪ್ಕೋ ಕಾಂಞಂಗಾಡ್ ಶಾಖೆಯ ಸಿಬ್ಬಂದಿಯವರು ಉಪಸ್ಥಿತರಿದ್ದು, ವಿದ್ಯಾರ್ಥಿನಿಯ ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು