ಕಾಸರಗೋಡು: ಹಸುವನ್ನು ಮೇಯಿಸಲು ಕಟ್ಟಲು ಹೋಗಿದ್ದ ವೃದ್ಧೆಯೊಬ್ಬರು ಆಕಸ್ಮಿಕವಾಗಿ ಆಳಕ್ಕೆ ಕಾಲು ಜಾರಿ ಬಿದ್ದು ದುರಂತವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಬೇಕಲ ಪೊಲೀಸ್ ಠಾಣಾ ವ್ಯಾಪ್ತಿಯ ಪೆರಿಯ, ಮಿನ್ನಂಕುಳಂ, ಪುಳಿಕಾಲ್, ಕಾರ‍್ಯಮೊಟ್ಟೆಯ ದಿವಂಗತ ದಾಮೋದರನ್ ಅವರ ಪತ್ನಿ ರುಕ್ಮಿಣಿ (71) ಮೃತಪಟ್ಟವರು.
ಇಂದು (ಬುಧವಾರ) ಮಧ್ಯಾಹ್ನ ಎರಡು ಗಂಟೆಯ ಸುಮಾರಿಗೆ ಈ ದಾರುಣ ಘಟನೆ ಸಂಭವಿಸಿದೆ. ಅಪಘಾತಕ್ಕೆ ಸಂಬಂಧಿಸಿದಂತೆ ಬೇಕಲ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಮೃತರು ಮಕ್ಕಳಾದ ಮಾಲಿನಿ, ರಜನಿ, ರಜಿತಾ.
ಅಳಿಯಂದಿರಾದ ರಾಜು (ಪನತ್ತಡಿ), ಸುಧಾಕರನ್ (ಕಾಡಕಂ), ದಿವಂಗತ ರಾಜನ್ (ತನ್ನೋಟ್) ಸಹೋದರಿಯರಿಯರಾದ ಯಶೋದಾ, ರಾಧಾ ಎಂಬಿವರನ್ನು ಅಗಲಿದ್ದಾರೆ.
Tags
ಕಾಸರಗೋಡು
