ತಮ್ಮನ ಉತ್ತರಕ್ರಿಯೆಯ ನಡುವೆ ಅಣ್ಣ ಕುಸಿದು ಬಿದ್ದು ಮೃತ್ಯು

 


ಕಾಸರಗೋಡು:  ತಮ್ಮನ ಉತ್ತರಕ್ರಿಯೆಯ ನಡು‍ವೆಯೇ ಕುಸಿದುಬಿದ್ದು ಅಣ್ಣ ಮೃತಪಟ್ಟ ಘಟನೆ ನಡೆದಿದೆ. ತೃಕ್ಕರಿಪ್ಪುರ ಆಯಿಟ್ಟಿ ನಗರ ನಿವಾಸಿ ಎಂ. ಲಕ್ಷ್ಮಣ (68) ಮೃತಪಟ್ಟವರು. ತಮ್ಮ ಎಂ. ಗೋಪಾಲನ್ ಅವರ ಅಗಲಿಕೆಯ 12ನೇ ದಿನದ ಕಾರ್ಯಕ್ರಮಗಳಗಾಗಿ  ತೃಕ್ಕಣ್ಣಾಡ್ ಕ್ಷೇತ್ರಕ್ಕೆ ಲಕ್ಷ್ಮಣ್ ಮತ್ತು ಸಂಬಂಧಿಕರು ಆಗಮಿಸಿದ್ದರು. ಕ್ಷೇತ್ರದ ಹೊರಗೆ ಕಾರ್ಯಕ್ರಮಗಳು  ನಡೆಯುತ್ತಿದ್ದಾಗ ಲಕ್ಷ್ಮಣ್ ಕುಸಿದುಬಿದ್ದಿದ್ದಾರೆ. ತಕ್ಷಣವೇ ಅವರನ್ನು ಪಾಲಕ್ಕುನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. ಮೃತರು ಪತ್ನಿ ಪಿ. ಸರಸ್ವತಿ, ಪುತ್ರಿ ಪಿ. ಲಜಿನಾ ಎಂಬಿವರನ್ನು ಅಗಲಿದ್ದಾರೆ



ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು