ವಿರೋಧ ಪಕ್ಷಗಳ ಹಿಂಸಾತ್ಮಕ ಪ್ರತಿಭಟನೆ ಖಂಡಿಸಿ ಹಾಗೂ ನರೇಂದ್ರ ಮೋದಿ ಅವರಿಗೆ ಬೆಂಬಲ ಸೂಚಿಸಿ ಕಾಞಂಗಾಡಿನಲ್ಲಿ ಬಿಜೆಪಿ ಮಾರ್ಚ್ ನಾಳೆ, ರಾಜ್ಯ ಸೆಲ್ ಕೋರ್ಡಿನೇಟರ್ ವಿ.ಕೆ.ಸಜೀವನ್ ಉದ್ಘಾಟನೆ


 ಕಾಸರಗೋಡು:ಕಾಕ್ರೋಚ್ ಜನತಾ ಪಾರ್ಟಿ  ಮತ್ತು ಕಾಂಗ್ರೇಸ್ ಸೇರಿದಂತೆ ವಿರೋಧ ಪಕ್ಷಗಳು ನವದೆಹಲಿಯಲ್ಲಿ ನಡೆಸುತ್ತಿರುವ ಹಿಂಸಾತ್ಮಕ ಪ್ರತಿಭಟನೆಯನ್ನು ಖಂಡಿಸಿ ಹಾಗೂ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಬೆಂಬಲ ವ್ಯಕ್ತಪಡಿಸಿ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ನಾಳೆ (ಜುಲೈ 25, ಶನಿವಾರ) ಸಂಜೆ 4 ಗಂಟೆಗೆ ಕಾಞಂಗಾಡ್ ನಗರದಲ್ಲಿ ಬೃಹತ್ ಮಾರ್ಚ್ ನಡೆಯಲಿದೆ.

ಕೋಟಚೇರಿಯಿಂದ ಆರಂಭವಾಗಿ ಪುದಿಯಕೋಟೆಯಲ್ಲಿ ಮುಕ್ತಾಯಗೊಳ್ಳಲಿರುವ ಈ ಮಾರ್ಚ್‌ನಲ್ಲಿ ಸಾವಿರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ.

ಬಿಜೆಪಿ ರಾಜ್ಯ ಸೆಲ್ ಸಂಚಾಲಕ (Co-ordinator) ವಿ. ಕೆ. ಸಜೀವನ್ ಅವರು ಮಾರ್ಚ್ ಉದ್ಘಾಟಿಸಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು