ಶಾಲಾ ವರಾಂಡದಲ್ಲಿ ಮರಿ ಹಾಕಿದ ನಾಯಿ, ಶಾಲೆಗೆ ರಜೆ ಸಾರಿದ ಅಧಿಕೃತರು


ತ್ರಿಶೂರು: ಶಾಲಾ ವರಾಂಡದಲ್ಲಿ ಬೀದಿ ನಾಯಿಯೊಂದು ಮರಿ ಹಾಕಿದ  ಹಿನ್ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿಯು ಇಂದು (ಸೋಮವಾರ) ಶಾಲೆಗೆ ರಜೆ ಘೋಷಿಸಿದೆ. ತ್ರಿಶೂರಿನ ಚೂಂಡಲ್ ಗವರ್ನಮೆಂಟ್ ಯು.ಪಿ ಶಾಲೆಗೆ ಈ ರಜೆ ನೀಡಲಾಗಿದೆ.

ಭಾನುವಾರದ ರಜೆಯ ನಂತರ ಇಂದು ಬೆಳಿಗ್ಗೆ ವಿದ್ಯಾರ್ಥಿಗಳು ಶಾಲೆಗೆ ಬಂದಾಗ, ಶಾಲಾ ವರಾಂಡದಲ್ಲಿ ಬೀದಿ ನಾಯಿಯೊಂದು ಮರಿಗಳೊಂದಿಗೆ ಮಲಗಿರುವುದು ಕಂಡುಬಂದಿದೆ. ನಾಯಿಗೆ ನಾಲ್ಕು ಮರಿಗಳಿವೆ. ಮರಿಹಾಕಿದ ನಾಯಿಯಲ್ಲದೆ ಇನ್ನು ಹತ್ತಕ್ಕೂ ಹೆಚ್ಚು ಬೀದಿ ನಾಯಿಗಳು ಶಾಲಾ ಆವರಣ ಮತ್ತು ವರಾಂಡದಲ್ಲಿ ಬೀಡುಬಿಟ್ಟಿವೆ. ನಾಯಿಗಳ ಹಿಂಡು ಮಕ್ಕಳ ಮೇಲೆ ದಾಳಿ ಮಾಡುವ ಸಾಧ್ಯತೆಯಿರುವುದರಿಂದ, ಮುಂಜಾಗ್ರತಾ ಕ್ರಮವಾಗಿ ಶಾಲೆಗೆ ರಜೆ ನೀಡಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ.

ಒಂದು ವಾರದ ಹಿಂದೆ ಇದೇ ಶಾಲೆಯ ವಿದ್ಯಾರ್ಥಿಯೊಬ್ಬನಿಗೆ ಬೀದಿ ನಾಯಿ ಕಚ್ಚಿತ್ತು. ಶಾಲೆಗೆ ಹೋಗುವ ದಾರಿಯಲ್ಲಿ ಈ ಘಟನೆ ನಡೆದಿತ್ತು. ನಂತರ ಆ ಮಗುವಿಗೆ ಕಚ್ಚಿದ ಬೀದಿ ನಾಯಿ ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು