ಅಸೌಖ್ಯದಿಂದಾಗಿ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಯುವತಿ ಮೃತ್ಯು


 ಬದಿಯಡ್ಕ: ಅಸೌಖ್ಯದಿಂದಾಗಿ ಆಸ್ಪತ್ರೆಗೆ ಕೊಂಡೊಯ್ಯುವ ಮಧ್ಯೆ ಯುವತಿ ಮೃತಪಟ್ಟ ಘಟನೆ ನಡೆದಿದೆ. ಬದಿಯಡ್ಕ ಚೆನ್ನಾರಕಟ್ಟೆ ಬಳಿಯ ಬಾಡಿಗೆ ಮನೆಯಲ್ಲಿ ವಾಸಿಸುವ ಜಗದೀಶ ಅವರ ಪತ್ನಿ ರೋಹಿಣಿ(36) ಮೃತಪಟ್ಟ ಯುವತಿ. ಇವರಿಗೆ ಉಸಿರಾಟದ ತೊಂದರೆ ಕಂಡುಬಂದಿದ್ದು ಕೂಡಲೇ ಕಾಸರಗೋಡು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಲ್ಲಿಗೆ ತಲುಪಿದಾಗ ಅವರು ಕೊನೆಯುಸಿರೆಳೆದ್ದರು. ಇವರು ಕಫ ಸಂಬಂಧ ರೋಗದಿಂದ ಬಳಲುತ್ತಿದ್ದು ನ್ಯುಮೋನಿಯ ಕಾರಣದಿಂದ ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ. ಮೃತರು ಪತಿ ಜಗದೀಶ, ತಂದೆ ಬಾಬು, ತಾಯಿ ಲಕ್ಷ್ಮಿ ಮಕ್ಕಳಾದ ಅಶ್ವಿನಿ, ಅಶ್ವಥ್, ಭುವನೇಶ್, ಭೂಮಿಕಾ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು