ಕುಂಬಳೆ: ತೀವ್ರ ಜ್ವರದಿಂದಾಗಿ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಲ್ಪಟ್ಟ ಯುವತಿ ಮೃತಪಟ್ಟ ಘಟನೆ ನಡೆದಿದೆ. ಆರಿಕ್ಕಾಡಿ ಜೋಡುಗೋಳಿ ನಿವಾಸಿ ಮಾಧವ-ಸಂಧ್ಯ ದಂಪತಿಯ ಪುತ್ರಿ ಪಯಸ್ವಿನಿ(22) ಮೃತಪಟ್ಟ ಯುವತಿ. ಇಂದು (ಶನಿವಾರ) ಆಕೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಳು. ತೀವ್ರ ಜ್ವರದಿಂದಾಗಿ ಮೂರು ದಿನಗಳ ಹಿಂದೆ ಆಕೆಯನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.
ಮೃತಳು ತಂದೆ, ತಾಯಿ, ಸಹೋದರರಾದ ಶುಹಾನ್, ಯಜ್ಞೇಶ್ ಎಂಬಿವರನ್ನು ಅಗಲಿದ್ದಾರೆ
Tags
ಕುಂಬಳೆ
