ಬದಿಯಡ್ಕ: 2024-25 ವರ್ಷದ ವಾರ್ಷಿಕ ಯೋಜನೆಯಲ್ಲಿ ನಿಧಿ ಕಾದರಿಸಿದ ಪ್ರಕಾರ ಬದಿಯಡ್ಕ ಪೇಟೆಯಲ್ಲಿ 5 ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಲಾಯಿತು. ಕ್ಯಾಮರಾ ಅಳವಡಿಕೆ ನಡೆಯುತ್ತಿರುವ ವೇಳೆ ಗ್ರಾಮ ಪಂಚಾಯತು ಅಧ್ಯಕ್ಷ ಶಂಕರ.ಡಿ.ನೇತೃತ್ವದಲ್ಲಿ ಬೇಟಿ ನೀಡಿ ಪರಿಶೀಲಿಸಲಾಯಿತು. ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಹಮೀದ್ ಕೆಡೆಂಜಿ, ರಜನಿ ಸಂದೀಪ್, ಗ್ರಾಮ ಪಂಚಾಯತು ಸದಸ್ಯ ಹರೀಶ್, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಶೆಟ್ಟಿ ಬೇಳ ಮೊದಲಾದವರು ಉಪಸ್ಥಿತರಿದ್ದರು. ರಸ್ತೆ ಬದಿಗಳಲ್ಲಿ ತ್ಯಾಜ್ಯ ಎಸೆಯುತ್ತಿರುವುದನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ. ಈ ವರ್ಷದ ವಾರ್ಷಿಕ ಯೋಜನೆಯಲ್ಲಿ ಇನ್ನಷ್ಟು ಕಡೆಗಳಲ್ಲಿ ಕ್ಯಾಮರಾ ಅಳವಡಿಸಲು ಅಗತ್ಯದ ನಿಧಿ ಕಾದಿರಿಸಲಾಗುವುದು ಎಂದು ಗ್ರಾಮ ಪಂಚಾಯತು ಅಧ್ಯಕ್ಷ ಶಂಕರ.ಡಿ.ತಿಳಿಸಿದ್ದಾರೆ.
Tags
ಬದಿಯಡ್ಕ
