ಯುವತಿಯನ್ನು ವಸತಿಗೃಹದಲ್ಲಿ ಕಟ್ಟಿಹಾಕಿ ಅತ್ಯಾಚಾರ ಎಸಗಿದ ಪ್ರಕರಣ, ಆರೋಪಿಯ ಬಂಧನ

 

 ಕಾಸರಗೋಡು:  ಹೋಟೆಲ್ ರೂಮಿಗೆ ಕರೆಸಿಕೊಂಡು ವಿವಾಹಿತೆಯಾದ 20 ವರ್ಷದ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ದೂರಿನ ಮೇರೆಗೆ ಆಕೆಯ ಮಾಜಿ ಪ್ರೇಮಿಯನ್ನು ಪೊಲೀಸರು ಬಂಧಿಸಿದ್ದಾರೆ. ಯುವತಿಯ ದೂರಿನ ಆಧಾರದ ಮೇಲೆ ಕಾಸರಗೋಡು ಟೌನ್ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಬಂಧಿತನನ್ನು ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುವ ವಿಷ್ಣು ಪ್ರಸಾದ್(24) ಎಂದು ಪೊಲೀಸರು ಗುರುತಿಸಲಾಗಿದೆ. ಭಾನುವಾರ ಹಗಲು ವೇಳೆ ಕಾಸರಗೋಡು ಹಳೇ ಬಸ್ ಸ್ಟ್ಯಾಂಡ್ ಸಮೀಪದ ಲಾಡ್ಜ್ ಒಂದರಲ್ಲಿ ಈ ಘಟನೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇತ್ತೀಚೆಗಷ್ಟೇ ವಿವಾಹವಾಗಿದ್ದ ಯುವತಿಯನ್ನು ಆಕೆಯ ಮಾಜಿ ಪ್ರೇಮಿ ಹೋಟೆಲ್ ರೂಮಿಗೆ ಕರೆಸಿಕೊಂಡಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ರೂಮಿಗೆ ಬಂದ ತಕ್ಷಣ ಯುವಕ ಆಕೆಯನ್ನು ಬಲವಂತವಾಗಿ ಹಿಡಿದು ಕಟ್ಟಿಹಾಕಿ, ಲೈಂಗಿಕ ಕಿರುಕುಳ ನೀಡಿದ್ದಾನೆ. 

ಘಟನೆಯ ದಿನದಂದು ಬಹಳ ಸಮಯದ ಹೊರತಾಗಿಯೂ ಯುವತಿ ಕಾಣಿಸದಿದ್ದಾಗ ಆಕೆಯ ಮನೆಯವರು ಹುಡುಕಾಟ ಆರಂಭಿಸಿದ್ದರು. ತದನಂತರ ನಡೆಸಿದ ಹುಡುಕಾಟದಲ್ಲಿ ಹಳೇ ಬಸ್ ಸ್ಟ್ಯಾಂಡ್ ಸಮೀಪದ ಲಾಡ್ಜ್‌ನಲ್ಲಿ ಯುವತಿ ಪತ್ತೆಯಾಗಿದ್ದಾಳೆ. ಮನೆಯವರು ವಿಚಾರಿಸಿದಾಗ ಯುವತಿ ತನಗೆ ನಡೆದ ದೌರ್ಜನ್ಯದ ವಿಷಯವನ್ನು ಬಹಿರಂಗಪಡಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು