ತೆಂಗಿನ ಕಾಯಿ ಕೊಯ್ಯುವ ವೇಳೆ ವಿದ್ಯುತ್ ಶಾಕ್ ತಗುಲಿ ಕಾರ್ಮಿಕ ಮೃತ್ಯು


 ತಿರುವನಂತಪುರಂ: ನೆಡುಮಂಗಾಡ್‌ನ ಪನವೂರ್‌ನಲ್ಲಿ ಕೆಲಸದ ವೇಳೆ ತೆಂಗು ಕೀಳುವ ಕಾರ್ಮಿಕರೊಬ್ಬರು ವಿದ್ಯುತ್ ಶಾಕ್ ತಗುಲಿ ಮೃತಪಟ್ಟಿದ್ದಾರೆ. ಪನಯಂಮುಟ್ಟಂ ನಿವಾಸಿ ಭುವನಚಂದ್ರನ್ ನಾಯರ್ (60) ಮೃತಪಟ್ಟ ದುರ್ದೈವಿ.

ಏಣಿ ಬಳಸಿ ತೆಂಗಿನ ಮರ ಹತ್ತಿ ಕಾಯಿ ಕೀಳುತ್ತಿದ್ದಾಗ, ಅವರು ಬಳಸುತ್ತಿದ್ದ ಕಬ್ಬಿಣದ ದೋಟಿ ಆಕಸ್ಮಿಕವಾಗಿ ವಿದ್ಯುತ್ ಲೈನ್‌ಗೆ ತಗುಲಿ ಈ ಅಪಘಾತ ಸಂಭವಿಸಿದೆ. ನಿನ್ನೆ  (ಸೋಮವಾರ) ಬೆಳಗ್ಗೆ  ಈ ಘಟನೆ ನಡೆದಿದೆ. ಪನವೂರ್ ಕರಿಕ್ಕುಝಿ ನಿವಾಸಿ ಸುಲೈಮಾನ್ ಎಂಬುವರ ಮನೆಯಲ್ಲಿ ಕೆಲಸಕ್ಕೆ ಬಂದಿದ್ದಾಗ ಈ ಘಟನೆ ಸಂಭವಿಸಿದೆ.

ವಿದ್ಯುತ್ ಶಾಕ್ ತಗುಲಿ ಕೆಳಗೆ ಬಿದ್ದ ಇವರನ್ನು ತಕ್ಷಣವೇ ನೆಡುಮಂಗಾಡ್ ಆಸ್ಪತ್ರೆಗೆ ತಲುಪಿಸಲಾಯಿತಾದರೂ ಬದುಕಿಸಲು ಸಾಧ್ಯವಾಗಲಿಲ್ಲ. ಘಟನೆಗೆ ಸಂಬಂಧಿಸಿದಂತೆ ನೆಡುಮಂಗಾಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು