ಮಲಪ್ಪುರಂ: ಅಯಿಕೋಡ್‌ನ ಖಾಸಗಿ ವಸತಿಗೃಹಕ್ಕೆ ದಾಳಿ ನಡೆಸಿದ ಪೊಲೀಸರು 14 ಗ್ರಾಂ ಎಂಡಿಎಂಎ (MDMA) ಮಾದಕ ವಸ್ತುವಿನೊಂದಿಗೆ ಕಾಲೇಜು ವಿದ್ಯಾರ್ಥಿನಿ ಸೇರಿದಂತೆ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ. ಪೂಕಳತ್ತೂರ್ ನಿವಾಸಿಗಳಾದ ಮುಹಮ್ಮದ್ ದಿಲ್ಶಾದ್, ಶಹಲ್ ನಮಾಸ್, ಕಾರಾಪರಂಬ್ ಕೂಟಾವ್ ನಿವಾಸಿ ಸಜ್ಮೀರ್ ಮತ್ತು ಕೊಲ್ಲಂ ಅಂಚಲ್ ನಿವಾಸಿ ಫಿದಾ ಫಾತಿಮಾ (20) ಬಂಧಿತ ಆರೋಪಿಗಳು.
ಮಲಪ್ಪುರಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಅಯಿಕೋಡ್ ಪೊಲೀಸರು ಮತ್ತು ಡಾನ್ಸಾಫ್ (DANSAF) ತಂಡ ಜಂಟಿಯಾಗಿ ಕೈಪಕುಳಂನಲ್ಲಿರುವ ವಸತಿಗೃಹದ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಸಕ್ರಿಯವಾಗಿರುವ ಮಾದಕ ದ್ರವ್ಯ ಜಾಲವನ್ನು ಮಟ್ಟಹಾಕಲು ಮುಂಬರುವ ದಿನಗಳಲ್ಲೂ ತಪಾಸಣೆಯನ್ನು ತೀವ್ರಗೊಳಿಸಲಾಗುವುದು ಎಂದು ಪೊಲೀಸರು ಮತ್ತು ಡಾನ್ಸಾಫ್ ತಿಳಿಸಿದ್ದಾರೆ.
Tags
ಕೋಜಿಕ್ಕೋಡ್
