ಉಚಿತ ಪ್ರಯಾಣ ಸೌಲಭ್ಯವಿರುವ ಪ್ರಿಯದರ್ಶಿನಿ ಬಸ್ಸಿನಲ್ಲಿ ಮಹಿಳೆಯರ ದಾಂಧಲೆ; ಮೂರು ಮಂದಿಯ ಸೆರೆ


 ಕೋಜಿಕ್ಕೋಡು: ಉಚಿತ ಪ್ರಯಾಣ ಸೌಲಭ್ಯವಿರುವ ಪ್ರಿಯದರ್ಶಿನಿ ಬಸ್ಸಿನಲ್ಲಿ ಮಹಿಳೆಯರು ದಾಂಧಲೆ ನಡೆಸಿದ ಪ್ರಕರಣ ನಡೆದಿದೆ. ಈ ಸಂಬಂಧ ಮೂರು ಮಂದಿ‌ ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ. ನಿನ್ನೆ (ಮಂಗಳವಾರ) ಮಧ್ಯಾಹ್ನ ಕೋಜಿಕ್ಕೋಡು-ಸುಲ್ತಾನ್ ಬತ್ತೇರಿ ಟೌನ್ ಟೂ ಟೌನ್ ಬಸ್ಸಿನಲ್ಲಿ ಈ ಘಟನೆ ನಡೆದಿದೆ. ನಿಲ್ದಾಣದಿಂದ ಹೊರಟ ಬಸ್ಸು ನಿಲ್ಲಿಸಲು ಸೂಚಿಸಿದ್ದು ಆದರೆ ಬಸ್ಸು ಮುಂದಕ್ಕೆ ಸಾಗಿತು. ಈ ವೇಳೆ ಪ್ರಯಾಣಿಕರಾದ ಮಹಿಳೆಯರು ಗಲಾಟೆ ಆರಂಭಿಸಿದಾಗ ಬಸ್ಸು ನೇರವಾಗಿ ಪೊಲೀಸ್ ಠಾಣೆಗೆ ಕೊಂಡೊಯ್ಯಲಾಯಿತು. ಪೊಲೀಸರು ದಾಂಧಲೆ ನಡೆಸಿದ ಮೂರು ಮಂದಿ ಮಹಿಳೆಯರನ್ನು ಬಂಧಿಸಿ ಕೇಸು ದಾಖಲಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು