ಬಾಲಗೋಕುಲ ಉತ್ತರ ಕೇರಳಂ ರಾಜ್ಯ ವಾರ್ಷಿಕ ಸಮ್ಮೇಳನ; ಆಮಂತ್ರಣ ಪತ್ರಿಕೆ ಬಿಡುಗಡೆ


 ಕಾಸರಗೋಡು: ಬಾಲಗೋಕುಲ ಉತ್ತರ ಕೇರಳಂ ಇದರ ರಾಜ್ಯ ವಾರ್ಷಿಕ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು  ಶ್ರೀಮದ್ ಎಡನೀರು ಮಠಧೀಶರಾದ  ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಬಿಡುಗಡೆಗೊಳಿಸಿದರು. 2026 ಜುಲೈ 10,11 ಮತ್ತು 12ರಂದು ಕಾಸರಗೋಡು ವಿದ್ಯಾನಗರ ಚಿನ್ಮಯ ತೇಜಸ್ ಆಡಿಟೋರಿಯಂನಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಗೌರವಾನ್ವಿತ ಕೇಂದ್ರ ಇಂಧನ ಸಚಿವ ಶ್ರೀ ಶ್ರೀಪಾದ್ ಯಶೋ ನಾಯ್ಕ್, ಗೌರವಾನ್ವಿತ ರಾಜ್ಯಸಭಾ ಸದಸ್ಯ ಶ್ರೀ ಸಿ. ಸದಾನಂದನ್ ಮಾಸ್ಟರ್ ಸೇರಿದಂತೆ ಪ್ರಮುಖ ಗಣ್ಯರು ಭಾಗವಹಿಸಲಿದ್ದಾರೆ.

ಮಕ್ಕಳಲ್ಲಿ ಆರ್ಷಜ್ಞಾನ ಮತ್ತು ದೇಶಪ್ರೇಮವನ್ನು ಬೆಳೆಸುವ ಹಾಗೂ ಸಮಾಜ ಪರಿವರ್ತನೆಯ ಧೈಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಬಾಲಗೋಕುಲದ ಈ ಮೂರು ದಿನಗಳ ಬೃಹತ್ ಕಾರ್ಯಕ್ರಮಕ್ಕೆ ಸ್ವಾಮೀಜಿಗಳು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಬಾಲಗೋಕುಲದ ಜಿಲ್ಲಾ ರಕ್ಷಾಧಿಕಾರಿ ಶ್ರೀ ಜಯರಾಮ ಶೆಟ್ಟಿ, ಗೋಕುಲ ಜಿಲ್ಲಾ ಅಧ್ಯಕ್ಷ ಶ್ರೀ ದಿನೇಶ್ ಮಾಸ್ಟರ್, ಗೋಕುಲ ಜಿಲ್ಲಾ ಕಾರ್ಯದರ್ಶಿ ಶ್ರೀ ರಾಜೇಂದ್ರ ಮವ್ವಾರು, ರೆವೆನ್ಯೂ ಜಿಲ್ಲಾ ಅಧ್ಯಕ್ಷ ಶ್ರೀ ನಾರಾಯಣನ್ ಮಾಸ್ಟರ್, ಬದಿಯಡ್ಕ ತಾಲೂಕು ರಕ್ಷಾಧಿಕಾರಿ ಶ್ರೀ ಜಯರಾಮ ಚೆಟ್ಟಿಯಾರ್, ಬದಿಯಡ್ಕ ತಾಲೂಕು ಸಮನ್ವಯ ಸಮಿತಿ ಅಧ್ಯಕ್ಷ ನ್ಯಾಯವಾದಿ ಗಣೇಶ್, ಕಾಸರಗೋಡು ತಾಲೂಕು ಕಾರ್ಯದರ್ಶಿ ಶ್ರೀ ಹರ್ಷರಾಜ್, ಸಹ ಕಾರ್ಯದರ್ಶಿ ಶ್ರೀ ರಾಕೇಶ್ ಪಕಳ, ಪ್ರಚಾರ ಸಮಿತಿ ಸಂಚಾಲಕರಾದ ಶ್ರೀ ರವೀಂದ್ರ ರೈ ಕಜೆ, ಪೈಕ ಮಂಡಲ ರಕ್ಷಾಧಿಕಾರಿ ಶ್ರೀ ಕುಂಞಂಬು ಮಾಸ್ಟರ್, ಅಧ್ಯಕ್ಷ ಶ್ರೀ ಕುಮಾರನ್ ಹಾಗೂ ಮೊಗ್ರಾಲ್‌ಪುತ್ತೂರು ಮಂಡಲಾಧ್ಯಕ್ಷರಾದ ಶ್ರೀ ಚಂದ್ರಶೇಖರನ್, ಜಿಲ್ಲಾ ಕೋಶಾಧಿಕಾರಿ ಶ್ರೀ ನಟರಾಜ ಕಲ್ಲಕಳಂಬಿ, ಕುಂಬಡಾಜೆ ಮಂಡಲ ಅಧ್ಯಕ್ಷ ಶ್ರೀ ಸೀತಾರಾಮ ಭಟ್ ಮತ್ತಿತರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು