2.306 ಕಿಲೊ ಎಂಡಿಎಂಎ ವಶಪಡಿಸಿದ ಪ್ರಕರಣ; ಫ್ಯಾಶನ್ ಡಿಸೈನರ್ ಸೆರೆ


 ಕೋಜಿಕ್ಕೋಡು: 2.306 ಕಿಲೊ ಮಾರಕ ಎಂಡಿಎಂಎ ಮಾದಕ ವಸ್ತು ವಶಪಡಿಸಿದ ಪ್ರಕರಣದಲ್ಲಿ ಫ್ಯಾಶನ್ ಡಿಸೈನರನ್ನು ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ನೀಲೇಶ್ವರ ನಿವಾಸಿ ಖದೀಜ(40) ಬಂಧಿತ ಆರೋಪಿ. ತಾಮರಶೇರಿ ಪೊಲೀಸರು ಈಕೆಯನ್ನು ನೀಲೇಶ್ವರದಿಂದ ಬಂಧಿಸಿದ್ದಾರೆ.

  ಎಪ್ರಿಲ್ 2 ರಂದು ಕೋಜಿಕ್ಕೋಡಿನಿಂದ ಮುಹಮ್ಮದ್ ಹನೀಫ ಎಂಬಾತನನ್ನು 2.306 ಕಿಲೊ ಎಂಡಿಎಂಎ ಸಹಿತ ಬಂಧಿಸಲಾಗಿತ್ತು. ಈತನನ್ನು ಮಾಹಿತಿ ಸಂಗ್ರಹಕ್ಕಾಗಿ ದೆಹಲಿಗೆ ಕೊಂಡೊಯ್ಯುತ್ತಿದ್ದಾಗ ಈತ ಪೊಲೀಸರಿಂದ ತಪ್ಪಿಸಿ ಪರಾರಿಯಾಗಿದ್ದನು. ಅನಂತರ ಈತನನ್ನು ಕರ್ಣಾಟಕದ ಕಲ್ಬುರ್ಗಿಯಿಂದ ಬಂಧಿಸಲಾಗಿತ್ತು. ತಪ್ಪಿಸಿಕೊಂಡ ವೇಳೆ ಮುಹಮ್ಮದ್ ಹನೀಫನಿಗೆ ಖದೀಜ ಹಣ ನೀಡಿ ಸಹಾಯ ಮಾಡಿದ್ದಳು. ಈ ಕಾರಣಕ್ಕಾಗಿ ಖದೀಜಾಳ ಬಂಧನ ನಡೆದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು