ಕಟ್ಟಡ ನಿರ್ಮಿಸಲು ಮಣ್ಣು ತೆಗೆದ ಪರಿಣಾಮ; ಯಾವುದೇ ಕ್ಷಣದಲ್ಲಿ ಜರಿದು ಬೀಳುವ ಅಪಾಯದ ಸ್ಥಿತಿಯಲ್ಲಿ ಮನೆ


ಬದಿಯಡ್ಕ: ಕಟ್ಟಡ ನಿರ್ಮಿಸಲು ಮಣ್ಣು ತೆಗೆದ ಪರಿಣಾಮದಿಂದಾಗಿ  ಖಾಸಗಿ ವ್ಯಕ್ತಿಯ ಮನೆ  ಅಪಾಯ ಸ್ಥಿತಿಯಲ್ಲಾಗಿದೆ.‌ಮನೆಯ ಮುಂಭಾಗದ ಅಂಗಳದ ಕಂಪೌಂಡು ಜರಿದು ಬಿದ್ದಿದ್ದು ಮನೆಯೇ ಕೆಳಗೆ ಉರುಳುವ ಸ್ಥಿತಿಯಲ್ಲಿದೆ. 

  ಬದಿಯಡ್ಕ ಪೇಟೆಯಲ್ಲಿ ಪುತ್ತೂರು ರಸ್ತೆಯ ಬದಿಯಲ್ಲಿ ಈ ಘಟನೆ ನಡೆದಿದೆ. ಖಾಸಗಿ ಕಂಪನಿಯೊಂದು ಕಟ್ಟಡ ನಿರ್ಮಿಸುವ ಸಲುವಾಗಿ ಇಲ್ಲಿ ಮಣ್ಷು ತೆಗೆದು ಸಮತಟ್ಟು ಮಾಡಿತ್ತು. ಖಾಸಗಿ ವ್ಯಕ್ತಿಯ ಮನೆಯ ಅಂಗಳದ ಅಂಚಿನ ವರೆಗೆ‌ ಮಣ್ಣು ತೆಗೆಯಲಾಗಿದೆ. ಮನೆಯ ಅಂಗಳದ ಬದಿಯಲ್ಲಿರುವ ಕೆಂಪು ಕಲ್ಲಿನ ಕಾಂಪೌಂಡ್ ಈಗಾಗಲೇ ಜರಿದು ಬಿದ್ದಿದೆ. ಮನೆಯ ಅಂಗಳದಲ್ಲಿ ಕೊಳವೆ ಬಾವಿ ಇದ್ದು ಇದು ಸಹ ಯಾವುದೇ ಕ್ಷಣದಲ್ಲಿ  ಬೀಳುವ ಸಾಧ್ಯತೆಯಿದೆ. ಮನೆಯೇ ಕೆಳಗುರುಳುವ ಸಾಧ್ಯತೆ ಇದೆಯೆನ್ನಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು