ಅಕ್ರಮ ತಂಬಾಕು ತಯಾರಿಕಾ ಕೇಂದ್ರಕ್ಕೆ ಪೊಲೀಸರ ದಾಳಿ: 15 ಸಾವಿರ ತಂಬಾಕು ಪ್ಯಾಕೆಟ್, ಪ್ಯಾಕಿಂಗ್ ಯಂತ್ರ ಸಹಿತ ಇಬ್ಬರ ಬಂಧನ


  ಕಾಸರಗೋಡು: ಮೇಲ್ಪರಂಬ ಪೊಲೀಸರು ನಡೆಸಿದ ದಾಳಿಯಲ್ಲಿ ಅಕ್ರಮವಾಗಿ ತಂಬಾಕು ಉತ್ಪನ್ನಗಳನ್ನು ತಯಾರಿಸುತ್ತಿದ್ದ ಮನೆಯಿಂದ ಪ್ಯಾಕಿಂಗ್ ಯಂತ್ರಗಳು ಮತ್ತು 15,000 ತಂಬಾಕು ಪ್ಯಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ತಂಬಾಕು ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳನ್ನೂ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.

ಪೊಲೀಸರನ್ನು ನೋಡಿ ಓಡಿಹೋಗಲು ಯತ್ನಿಸಿದ ಇಬ್ಬರನ್ನು ಪೊಲೀಸರು ಬೆನ್ನಟ್ಟಿ ಹಿಡಿದಿದ್ದಾರೆ. ಮೈಲಾಟ್ಟಿಯ ಬಾಡಿಗೆ ಮನೆಯೊಂದರಲ್ಲಿ ಈ ಅಕ್ರಮ ಉತ್ಪಾದನೆ ನಡೆಯುತ್ತಿತ್ತು. ಘಟನೆಗೆ ಸಂಬಂಧಿಸಿದಂತೆ ರಾಮದಾಸ್ ನಗರ ಕಳಿಯಂಗಾಡ್ ರಸ್ತೆಯ ಸಿ.ಎಂ. ಜಾಫರ್ ಶರೀಫ್ (34), ನೀರ್ಚಾಲ್ ನಿವಾಸಿ ಹಾರಿಸ್ (28) ಎಂಬುವವರನ್ನು ಮೇಲ್ಪರಂಬ ಎಸ್‌ಐ ಟಿ. ಅಖಿಲ್ ನೇತೃತ್ವದ ಪೊಲೀಸರು ತಂಡ ಬಂಧಿಸಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು