ದೇವರು ಹಾಗೂ ಬಲಿದಾನಿಗಳ ಉಲ್ಲೇಖ; ತಿರುವನಂತಪುರಂ ಕಾರ್ಪರೇಶನಿನ 20 ಬಿಜೆಪಿ ಸದಸ್ಯರು ಪುನಃ ಪ್ರಮಾಣವಚನ ಸ್ವೀಕರಿಸುವಂತೆ ಹೈಕೋರ್ಟ್ ಆದೇಶ


 ಕೊಚ್ಚಿನ್: ತಿರುವನಂತಪುರಂ ನಗರಪಾಲಿಕೆಯ 20  ಬಿಜೆಪಿ ಸದಸ್ಯರುಗಳು ಪುನಃ ಪ್ರಮಾಣವಚನ ಮಾಡುವಂತೆ ರಾಜ್ಯ ಹೈಕೋರ್ಟ್ ಆದೇಶ ನೀಡಿದೆ. ಇವರು ದೇವರ ಹಾಗೂ ಬಲಿದಾನಿಗಳ ಹೆಸರಿನಲ್ಲಿ ಪ್ರಮಾಣವಚನ‌ ಮಾಡಿದ್ದು ಇದು ಸರಿಯಲ್ಲ ಎಂದು ಹೈಕೋರ್ಟ್ ಹೇಳಿದೆ.

ಇತಿಹಾಸದಲ್ಲಿ ಮೊತ್ತ ಮೊದಲ ಬಾರಿಗೆ ತಿರುವನಂತಪುರಂ ‌ಮಹಾನಗರಪಾಲಿಕೆ ಆಡಳಿತ ಬಿಜೆಪಿಗೆ ಲಭಿಸಿತ್ತು. ಈ ವೇಳೆ ಬಿಜೆಪಿಯ 20 ವಿಜೇತ ಸದಸ್ಯರುಗಳು ದೇವರುಗಳ ಹಾಗೂ ಬಲಿದಾನಿಗಳ ಹೆಸರುನಲ್ಲಿ ಪ್ರಮಾಣವಚನ ಮಾಡಿದ್ದರೆಂದು ಸಿಪಿಎಂ ದೂರಿತ್ತು. ಸಿಪಿಎಂ ನೇತಾರ ಎಸ್.ಪಿ.ದೀಪಕ್ ಎಂಬಾತ ಈ ಬಗ್ಗೆ ಹೈಕೋರ್ಟಿಗೆ ದೂರು ನೀಡಿದ್ದರು. ಈ ದೂರು ಪರಿಗಣಿಸಿದ ಹೈಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ. ನಾಲ್ಕು ವಾರಗಳೊಳಗೆ 20 ಬಿಜೆಪಿ ಸದಸ್ಯರು ಪುನಃ ಪ್ರಮಾಣವಚನ ಮಾಡಬೇಕು ಎಂದು ನ್ಯಾಯಾಲಯ ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು