ಕಾಸರಗೋಡು: ಪೋಷಕರನ್ನು ನೋಡಿಕೊಳ್ಳಲು ಬಂದಿದ್ದ ಮನೆಗೆಲಸದ ಮಹಿಳೆ ಚಿನ್ನ ಮತ್ತು ನಗದು ಕಳವು ಮಾಡಿರುವ ಕುರಿತು ದೂರು ದಾಖಲಾಗಿದೆ. ನೀಲೇಶ್ವರಂ ಪೇರೋಲ್‌ನ ಸಿರಿಯಾಕ್ ಎಂಬುವವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಅವರ ಮಗಳು ಚಿನು ಮರಿಯಾ ನೀಡಿದ ದೂರಿನ ಮೇರೆಗೆ ಮನೆಗೆಲಸದಾಕೆ ಸುಲೋಚನಾ ವಿರುದ್ಧ ನೀಲೇಶ್ವರಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸುಲೋಚನಾ 2022 ರಿಂದ ಇವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಚಿನು ಮರಿಯಾ ಅವರ ಪೋಷಕರನ್ನು ಉಪಚರಿಸಲು ಇವರನ್ನು ನೇಮಿಸಲಾಗಿತ್ತು. ಈ ನಡುವೆ ಮನೆಯಿಂದ ಸುಮಾರು ನಾಲ್ಕೂವರೆ ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಮತ್ತು ಹದಿನೇಳು ಸಾವಿರ ರೂಪಾಯಿಗಳನ್ನು ಕಳವು ಮಾಡಲಾಗಿದೆ ಎಂದು ಚಿನು ಮರಿಯಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
Tags
ಕಾಞಂಗಾಡ್
