ಕ್ಯಾಂಪ್ಕೊ ಸಂಸ್ಥೆಯ ಸಾಂತ್ವನ‌ ಯೋಜನೆ; ಬಾಯಾರು ಶಾಖೆಯ ಸಕ್ರಿಯ ಸದಸ್ಯರ ಚಿಕಿತ್ಸೆಗೆ ಧನಸಹಾಯ ಹಸ್ತಾಂತರ


 ಕಾಸರಗೋಡು : ಕ್ಯಾಂಪ್ಕೋ ಮಂಗಳೂರು ವತಿಯಿಂದ ಸಕ್ರಿಯ ಕೃಷಿಕರಿಗಾಗಿ ಹಮ್ಮಿಕೊಂಡಿರುವ  'ಸಾಂತ್ವನ' ಯೋಜನೆಯನ್ವಯ ಬಾಯಾರು ಕ್ಯಾಂಪ್ಕೋ ಶಾಖೆಯ ಸಕ್ರಿಯ ಸದಸ್ಯರಾದ ಶಂಕರನಾರಾಯಣ ಭಟ್,  ನಿಡುವಾಜೆ, ಬಾಯಾರು ಇವರ ಹೃದಯದ  ಆಂಜಿಯೋಪ್ಲ್ಯಾಸ್ಟಿ  ಶಸ್ತ್ರಚಿಕಿತ್ಸೆಗೆ ಧನಸಹಾಯವಾಗಿ ರೂ 50000ದ ಚೆಕ್ಕನ್ನು ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕರಾದ ಸದಾನಂದ ಶೆಟ್ಟಿ ಕೊಮ್ಮಂಡರವರು ಬಾಯಾರು ಕ್ಯಾಂಪ್ಕೋ ಶಾಖೆಯಲ್ಲಿ ವಿತರಿಸಿದರು. ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕರಾದ ಸೌಮ್ಯಾ ಪ್ರಕಾಶ್ ಮೀಯಪದವು, ಬದಿಯಡ್ಕ ವಲಯದ ಪ್ರಬಂಧಕರಾದ ಚಂದ್ರ ಯಂ,  ಕ್ಯಾಂಪ್ಕೋ ಬಾಯಾರು ಶಾಖೆಯ ಪ್ರಬಂಧಕರಾದ ರಮೇಶ್ ವೈ, ಸಿಬ್ಬಂದಿಗಳಾದ ಪ್ರವೀಣ್ ರಾಜ್ ಬಲ್ಲಾಳ್, ಕುಮಾರ್, ಸಜನ್, ವಿಕಾಸ್ ಜೈನ್ ಉಪಸ್ಥಿತರಿದ್ದರು.                 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು