ಬದಿಯಡ್ಕದಲ್ಲಿ ಪೆರಡಾಲ ಸೇವಾ ಸಹಕಾರಿ ಬೇಂಕ್ ನೂತನ ಕಟ್ಟಡದಲ್ಲಿ ಆರಂಭ


 ಬದಿಯಡ್ಕ: ಗ್ರಾಮೀಣ ಪ್ರದೇಶದ ಜನರಿಗೆ ಶತಮಾನಗಳಿಂದ ಸೇವೆಯನ್ನು ನೀಡುತ್ತಾ ಬಂದಿರುವ ಸಹಕಾರಿ ಸಂಸ್ಥೆ ನಾಡಿನ ಅಭಿವೃದ್ಧಿಗೆ ಕೊಡುಗೆಯನ್ನು ನೀಡಿದೆ. ಗ್ರಾಹಕರ ಸೌಕರ್ಯಕ್ಕಾಗಿ ಆಡಳಿತ ಮಂಡಳಿಯು ದಿಟ್ಟ ಹೆಜ್ಜೆಯನ್ನಿಟ್ಟು ಮುಂದುವರಿಯುತ್ತಾ ಬಂದಿದೆ. ಹಿರಿಯರ ಬೆವರಿನ ಫಲವಾಗಿ ಬೆಳೆದು ಬಂದ ಈ ಸಹಕಾರಿ ಸಂಸ್ಥೆಯು ಇನ್ನಷ್ಟು ಪ್ರಗತಿಯನ್ನು ಸಾಧಿಸುತ್ತಾ ನಾಡಿನ ಜನರಿಗೆ ಸೇವೆಯನ್ನು ನೀಡುವಂತಾಗಲಿ ಎಂದು ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷ ಶಂಕರ ಡಿ. ಅಭಿಪ್ರಾಯಪಟ್ಟರು.

ಪೆರಡಾಲ ಸೇವಾ ಸಹಕಾರಿ ಬೇಂಕ್ ಬದಿಯಡ್ಕ ಶಾಖೆಯು ಬದಿಯಡ್ಕ ಬಸ್ಸು ತಂಗುದಾಣದ ಪರಿಸರದಲ್ಲಿರುವ ಶಾಸ್ತಿçÃಸ್ ಕಟ್ಟಡಕ್ಕೆ ಸ್ಥಳಾಂತರಗೊAಡಿದ್ದು, ಬುಧವಾರ ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಬೇಂಕ್ ಅಧ್ಯಕ್ಷ ಕೆ.ಗಣಪತಿ ಪ್ರಸಾದ ಕುಳಮರ್ವ ಅಧ್ಯಕ್ಷತೆ ವಹಿಸಿದ್ದರು.  ಕಾಸರಗೋಡು ಸಹಕಾರಿ ಇಲಾಖೆಯ ಸಹಾಯಕ ನೊಂದಾವಣಾಧಿಕಾರಿ ವಿನೋದ್ ಕುಮಾರ್ ಸಿ. ಸೇಫ್ ಲಾಕರ್ ವ್ಯವಸ್ಥೆಯನ್ನು ಉದ್ಘಾಟಿಸಿ ಮಾತನಾಡುತ್ತಾ ಬೇಂಕಿAಗ್ ಕ್ಷೇತ್ರದಲ್ಲಿ ಪೆರಡಾಲ ಸೇವಾ ಸಹಕಾರಿ ಬೇಂಕ್ ಅನೇಕ ವರ್ಷಗಳಿಂದ ಉತ್ತಮವಾದ ಸೇವೆಯನ್ನು ನೀಡುತ್ತಾ ಬಂದಿದೆ. ಊರಿನ ಜನರ ಬೆಲೆಬಾಳುವ ವಸ್ತುಗಳ ಭದ್ರತೆಯ ದೃಷ್ಟಿಯಿಂದ ಲಾಕರ್ ವ್ಯವಸ್ಥೆಯನ್ನು ಅಳವಡಿಸಿರುವುದು ಶ್ಲಾಘನೀಯ. ಇದರ ಪ್ರಯೋಜನವನ್ನು ಜನರು ಪಡೆದುಕೊಳ್ಳಲಿ ಎಂದರು. ಬದಿಯಡ್ಕ ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ., ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಪಿ. ರಾಮಪ್ಪ ಮಂಜೇಶ್ವರ, ಬ್ಲೋಕ್ ಪಂಚಾಯಿತಿ ಸದಸ್ಯ ಮಹೇಶ್ ವಳಕ್ಕುಂಜ, ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಕುಂಜಾರು ಮುಹಮ್ಮದ್, ನಿವೃತ್ತ ಕಾರ್ಯದರ್ಶಿ ಅಜಿತ ಕುಮಾರಿ ವಿ.,  ಬೇಂಕಿನ ಮಾಜಿ ಅಧ್ಯಕ್ಷರುಗಳಾದ ವಿ.ಶ್ರೀಕೃಷ್ಣ ಭಟ್, ಕೆ.ವಿಷ್ಣು ಭಟ್ ಕೋರಿಕ್ಕಾರು, ಜಯದೇವ ಖಂಡಿಗೆ ಶುಭಾಶಂಸನೆಗೈದರು. ಕಾರ್ಯದರ್ಶಿ ಪಿ.ವಿಷ್ಣು ಶರ್ಮ ಸ್ವಾಗತಿಸಿ, ಉಪಾಧ್ಯಕ್ಷ ಅವಿನಾಶ್ ರೈ ವಿ ವಂದಿಸಿದರು. ಬೇಂಕಿನ ನಿರ್ದೇಶಕರು, ಗ್ರಾಹಕರು ಪಾಳ್ಗೊಂಡಿದ್ದರು. 1919ರಲ್ಲಿ ನೀರ್ಚಾಲಿನಲ್ಲಿ ಸ್ಥಾಪಿತವಾದ ಪೆರಡಾಲ ಸೇವಾ ಸಹಕಾರಿ ಬೇಂಕಿನ ಶಾಖೆಯು ಬದಿಯಡ್ಕ ಗಣೇಶ ಮಂದಿರದ ಮುಂಭಾಗದಲ್ಲಿ ಕಳೆದ ಅನೇಕ ವರ್ಷಗಳಿಂದ ಕಾರ್ಯಾಚರಿಸುತ್ತಿತ್ತು. ಪ್ರಸ್ತುತ ಗ್ರಾಹಕರಿಗೆ ಹೆಚ್ಚಿನ ಸೇವೆಯನ್ನು ನೀಡುವ ಸಲುವಾಗಿ ಬದಿಯಡ್ಕ ಬಸ್ಸು ತಂಗುದಾಣದ ಪಕ್ಕದಲ್ಲಿರುವ ಶಾಸ್ತ್ರೀಸ್ ಕಾಂಪ್ಲೆಕ್ಸ್ ಗೆ ಸ್ಥಳಾಂತರ ಗೊಂಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು