ರೈಲು ಪ್ರಯಾಣದ ವೇಳೆ ಪೆರ್ಲ ನಿವಾಸಿಯ ಮೊಬೈಲು ಕಳವು


 ಪೆರ್ಲ: ರೈಲು ಪ್ರಯಾಣದ ವೇಳೆ ಪ್ರಯಾಣಿಕರೊಬ್ಬರ ಐಫೋನ್ (iPhone) ಕಳುವಾಗಿದೆ. ಎಣ್ಮಕಜೆ,  ಬೇಂಗಪ್ಪದವು ಹೌಸ್‌ನ ಎಂ. ಅಬ್ದುಲ್ ಅಜೀಜ್ ಎಂಬುವವರು ತಮ್ಮ ಫೋನ್ ಕಳೆದುಕೊಂಡಿದ್ದಾರೆ. ನಿನ್ನೆ (ಬುಧವಾರ) ಅವರು ಆಲುವಾದಿಂದ ಮಾವೇಲಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಕಾಸರಗೋಡಿಗೆ ಪ್ರಯಾಣಿಸುತ್ತಿದ್ದರು. ಹಿಂಭಾಗದ ಜನರಲ್ ಕೋಚ್‌ನಲ್ಲಿ ಅವರು ಪ್ರಯಾಣಿಸುತ್ತಿದ್ದರು. ರೈಲು ಮುಂಜಾನೆ ಒಂದು ಗಂಟೆಗೆ ಆಲುವಾ ಮತ್ತು ಅಂಕಮಾಲಿ ನಡುವೆ ತಲುಪಿದಾಗ ಮೊಬೈಲ್ ಫೋನ್ ಕಳವು ಮಾಡಲಾಗಿದೆ. ಈ ಕುರಿತು ಕಾಸರಗೋಡು ರೈಲ್ವೆ ಪೊಲೀಸರಿಗೆ ದೂರು ನೀಡಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು