ಬದಿಯಡ್ಕ: ಎಡನೀರು ಸಮೀಪದ ಕನ್ನಾಡಿಪಾರೆ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದಲ್ಲಿ ವಿಶ್ವಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಶ್ರೀ ಮಂದಿರದ ಭಕ್ತರು, ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಯೋಗಶಿಕ್ಷಕ ವಿನಯಪಾಲ್ ಯೋಗಬಗ್ಗೆ ವಿವಿಧ ವಿಚಾರಗಳನ್ನು ತಿಳಿಸುತ್ತಾ ಆರೋಗ್ಯವಂತ ವ್ಯಕ್ತಿಗಳಿಂದ ಮಾತ್ರ ಸದೃಢ ಸಮಾಜ ಮತ್ತು ದೇಶ ನಿರ್ಮಾಣ ಸಾಧ್ಯ. ಯೋಗ ದಿನಾಚರಣೆಯು ಸಾರ್ವಜನಿಕರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮತ್ತು ಔಷಧ ಮುಕ್ತ ಜೀವನ ನಡೆಸಲು ಪ್ರೇರೇಪಿಸುವಲ್ಲಿ ಯಶಸ್ವಿಯಾಗಿದೆ. ಪ್ರತಿ ವರ್ಷ ಜೂನ್ 21 ರಂದು ಜಗತ್ತಿನಾದ್ಯಂತ' ಅಂತರರಾಷ್ಟ್ರೀಯ ಯೋಗ ದಿನಾಚರಣೆ'ಯನ್ನು ಸಂಭ್ರಮ ಅತ್ಯಂತ ಉತ್ಸಾಹದಿಂದ ಆಚರಿಸಲಾಗುತ್ತದೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಪ್ರಸ್ತಾಪನೆಯ ಮೇರೆಗೆ ವಿಶ್ವಸಂಸ್ಥೆಯು 2014 ಜೂನ್ 21 ಅನ್ನು ಯೋಗ ದಿನವಾಗಿ ಘೋಷಿಸಿತು. ಅಂದಿನಿಂದ, ಇದು ಕೇವಲ ಭಾರತಕ್ಕೆ ಸೀಮಿತವಾಗದೆ ಜಾಗತಿಕ ಆಂದೋಲನವಾಗಿ ಮಾರ್ಪಟ್ಟಿದೆ ಎಂದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.
Tags
ಬದಿಯಡ್ಕ
