ಕುಂಟಿಕಾನ ಮಠದ ಕೆ.ಎಂ.ವೆಂಕಟೇಶ್ವರ ಭಟ್ ನಿಧನ


ಬದಿಯಡ್ಕ: ನೀರ್ಚಾಲು ಸಮೀಪದ ಕುಂಟಿಕಾನ ಮಠದ ಮನೆಯ ಕೆ.ಎಂ.ವೆಂಕಟೇಶ್ವರ ಭಟ್ (72) ಶನಿವಾರ ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕಾಸರಗೋಡು ಸರಕಾರಿ ಆಸ್ಪತ್ರೆಯಲ್ಲಿ ಹೆಡ್ ಕ್ಲರ್ಕ್ ಆಗಿ ಸೇವೆಸಲ್ಲಿ ನಿವೃತ್ತರಾಗಿದ್ದ ಅವರು ನೀರ್ಚಾಲು ಸಮೀಪದ ಮೊಳೆಯಾರಿನಲ್ಲಿ ಅವರು ವಾಸಿಸುತ್ತಿದ್ದರು. ಕಳೆದ ಒಂದು ವಾರದಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕುಂಟಿಕಾನ ಮಠದ ಜೀರ್ಣೋದ್ಧಾರ ಕಾರ್ಯದಲ್ಲಿ ಅಹರ್ನಿಶಿಯಾಗಿ ದುಡಿದಿದ್ದರು. ಪತ್ನಿ ಗೀತಾ, ಪುತ್ರ ಶ್ಯಾಮ ಕುಮಾರ, ಪುತ್ರಿ ಬದಿಯಡ್ಕ ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ., ಅಳಿಯ ಬಾಲಸುಬ್ರಹ್ಮಣ್ಯ ಮಲ್ಲಡ್ಕ, ಸೊಸೆ ಕಾವ್ಯಾ, ಸಹೋದರರಾದ ಕುಂಟಿಕಾನ ಮಠದ ಆಡಳಿತ ಮೊಕ್ತೇಸರ ಕೆ.ಎಂ.ಶಂಕರನಾರಾಯಣ ಭಟ್, ಶ್ರೀಪತಿ ಕೆ.ಎಂ., ಶ್ರೀಕೃಷ್ಣ ಕೆ.ಎಂ., ನಟರಾಜ ಕೆ.ಎಂ., ಸಹೊದರಿ ಸರಸ್ವತಿ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು